ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ, ನೆರವಾದವರಿಗೆ 15 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:02 IST
Last Updated 24 ಅಕ್ಟೋಬರ್ 2024, 16:02 IST
<div class="paragraphs"><p>(ಪ್ರಾತಿನಿಧಿಕ ಚಿತ್ರ)</p></div>

(ಪ್ರಾತಿನಿಧಿಕ ಚಿತ್ರ)

   

ರರಪೆ ಚಸೆ

ಕಲಬುರಗಿ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಅಪರಾಧಿಗೆ 30 ವರ್ಷ ಹಾಗೂ ಕೃತ್ಯಕ್ಕೆ ನೆರವಾಗಿದ್ದ ಮೂವರಿಗೆ 15 ವರ್ಷ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಿದೆ.

ADVERTISEMENT

ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ಭೀಮಾಶಂಕರ ಚಂದ್ರಶೇಖರ, ಆತನ ಸಂಗಡಿಗರಾದ ಲಕ್ಷ್ಮಣ, ರಾಜು ಹಾಗೂ ಶರಣು ಜೈಲು ಶಿಕ್ಷೆಗೆ ಒಳಗಾದವರು.

ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀನೊಂದರಲ್ಲಿ 2022ರ ಜೂನ್‌ 4ರ ರಾತ್ರಿ 7.30ರ ವೇಳೆಗೆ ಬಾಲಕಿಯನ್ನು ಎಳೆದೊಯ್ದ ಭೀಮಾಶಂಕರ ಮತ್ತು ಆತನ ಸಂಗಡಿಗರು, ಆಕೆಯನ್ನು ಕಾರಿನಲ್ಲಿ ಕೂಡಿ ಹಾಕಿದ್ದರು. ಇದನ್ನು ತಡೆಯಲು ಬಂದಿದ್ದ ಬಾಲಕಿಯ ಸಂಬಂಧಿ ಮಹಿಳೆಯೊಬ್ಬರನ್ನು ಮನೆಯಲ್ಲಿ ಕೂಡಿ ಹಾಕಿ, ಬಾಲಕಿಯನ್ನು ಅಪಹರಿಸಿದ್ದರು.

ಬಾಲಕಿಯನ್ನು ಕಾರಿನಲ್ಲಿ ಅಫಜಲಪುರ ವ್ಯಾಪ್ತಿಯ ಕಬ್ಬಿನ ಗದ್ದೆಗೆ ಎಳೆದೊಯ್ದರು. ಬಾಲಕಿಗೆ ಬೆದರಿಕೆ ಹಾಕಿದ್ದ ಭೀಮಾಶಂಕರ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಮರುದಿನ ಬೆಳಿಗ್ಗೆ ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಅಫಜಲಪುರ ಪಟ್ಟಣದ ಹೋಟೆಲ್‌ಗೆ ಉಪಾಹಾರಕ್ಕೆಂದು ಕರೆದೊಯ್ದಾಗ ಆಕೆ ತಪ್ಪಿಸಿಕೊಂಡಳು. ನಡೆದ ಘಟನೆಯನ್ನು ಫೋನ್‌ ಮೂಲಕ ತನ್ನ ಸಹೋದರಿನಿಗೆ ತಿಳಿಸಿದ್ದಳು.

ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಎಂ.ಶಿವಪ್ರಸಾದ ಅವರು ತನಿಖೆ ನಡೆಸಿದ್ದರು. ವಿವಿಧ ಕಾಯ್ದೆಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದರು.

ವಾದ–ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ಪೋಕ್ಸೊ) ಎಫ್‌ಟಿಎಸ್‌ಸಿ–1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಭೀಮಾಶಂಕರಗೆ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ 30 ವರ್ಷ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕೃತ್ಯಕ್ಕೆ ನೆರವಾಗಿದ್ದ ಲಕ್ಷ್ಮಣ, ರಾಜು ಹಾಗೂ ಶರಣುಗೆ ತಲಾ ₹6 ಸಾವಿರ ದಂಡ ಹಾಗೂ 15 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹6 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.