ADVERTISEMENT

ಕಲಬುರಗಿ | ವಿಮಾನ ನಿಲ್ದಾಣದ ಟರ್ಮಿನಲ್‌ಗೆ ₹3.81 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 16:14 IST
Last Updated 14 ಅಕ್ಟೋಬರ್ 2023, 16:14 IST
ಕಲಬುರಗಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ
ಕಲಬುರಗಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ   

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದ ಒಳಾಂಗಣದ ಮರುನಿರ್ಮಾಣದ ಕಾಮಗಾರಿಗೆ ₹3.81 ಕೋಟಿ ಬಿಡುಗಡೆಯಾಗಿದೆ.

ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಿ ಇದೇ ನ.22ಕ್ಕೆ ನಾಲ್ಕು ವರ್ಷಗಳು ತುಂಬಲಿವೆ. ರನ್‌ವೇ ಮೇಲ್ಪದರು ಮರು ನಿರ್ಮಾಣದ ಬೆನ್ನಲ್ಲೇ ಟರ್ಮಿನಲ್ ಕಟ್ಟಡದ ಒಳಾಂಗಣದ ಮರುನಿರ್ಮಾಣವೂ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಟೆಂಡರ್ ಕರೆದಿದ್ದು, 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದೆ.

‘ಈಗಿರುವ ಟರ್ಮಿನಲ್‌ ಕೆಡವಿ ನೂರು ಪ್ರಯಾಣಿಕರ ಸಾಮರ್ಥ್ಯದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡುವಂತೆ ನಿಲ್ದಾಣ ಅಧಿಕಾರಿಗಳು ಎಎಐಗೆ ಮನವಿ ಮಾಡಿದ್ದರು. ಇದಕ್ಕಾಗಿ ಸುಮಾರು ₹50 ಕೋಟಿ ತಗುಲಬಹುದು ಎಂದಿದ್ದರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೊಸ ಕಟ್ಟಡ ಆಗುವುದಿಲ್ಲ’ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ ಎಂದು ನಿಲ್ದಾಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.