ADVERTISEMENT

ತುಳಜಾ ಭವಾನಿ ದರ್ಶನ; ಭಕ್ತರ ಪ್ರವೇಶಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 17:13 IST
Last Updated 2 ಅಕ್ಟೋಬರ್ 2021, 17:13 IST

ಕಲಬುರ್ಗಿ: ಮಹಾರಾಷ್ಟ್ರದ ತುಳಜಾಪುರದ ತುಳಜಾಭವಾನಿ ದೇವಸ್ಥಾನದಲ್ಲಿ ಪ್ರತಿ ವರ್ಷನವರಾತ್ರಿಅಂಗವಾಗಿ ನಡೆಯುತ್ತಿದ್ದ ಕೋಜಗಿರಿ ಪೌರ್ಣಿಮಾ ಯಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದ್ದು, ಅಕ್ಟೋಬರ್ 18ರಿಂದ 20ರವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಶ್ರೀ ತುಳಜಾಭವಾನಿ ಮಂದಿರ ಸಂಸ್ಥಾನದ ಅಧ್ಯಕ್ಷರೂ ಆದ ಉಸ್ಮಾನಾಬಾದ್ ಜಿಲ್ಲಾಧಿಕಾರಿ ಕೌಸ್ತುಭ ದಿವೇಗಾಂವ್ಕರ್ ತಿಳಿಸಿದ್ದಾರೆ.

ಪೌರ್ಣಿಮಾ ಯಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಆದರೆ, ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಾರದ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಆದ್ದರಿಂದ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ಈ ಅವಧಿಯನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ನಿತ್ಯ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ 5 ಸಾವಿರ ಗರಿಷ್ಠ ಸಂಖ್ಯೆಯ ಭಕ್ತರಿಗೆ ಪ್ರವೇಶ ನೀಡಲಾಗುವುದು. ಹೊರರಾಜ್ಯಗಳಿಂದ ಬರುವ ಭಕ್ತರು ಆನ್‌ಲೈನ್‌ ಮೂಲಕ ತಮ್ಮ ಪಾಸ್‌ಗಳನ್ನು ಕಾಯ್ದಿರಿಸಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.