ADVERTISEMENT

ಚಿತ್ತಾಪುರ: ಕಂಪ್ಯೂಟರ್ ಮಳಿಗೆಯಲ್ಲಿ ₹10 ಸಾವಿರ ಕಳವು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 7:37 IST
Last Updated 29 ಫೆಬ್ರುವರಿ 2024, 7:37 IST

ಚಿತ್ತಾಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಕಂಪ್ಯೂಟರ್ ಮಳಿಗೆಯಲ್ಲಿ ಇರಿಸಿದ್ದ ₹10,000 ನಗದು ಕದ್ದೊಯ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಗುರುವಾರ ಬೆಳಿಗ್ಗೆ ಮಳಿಗೆಯ ಶೆಟರ್ ತೆರಿದಿರುವುದು ಗಮನಿಸಿದ ಅಂಗಡಿಯ ಮಾಲೀಕ ಅಮೀರುಲ್ ಹಸನ್, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಮಳಿಗೆಯ ಶೆಟರ್ ತೆರೆದು ಹಣ ಕಳ್ಳತನ ಮಾಡಿದ ಕಳ್ಳನ ಮುಖಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಂಪ್ಯೂಟರ್ ಮಳಿಗೆ ಪಕ್ಕದ ಹೋಟೆಲ್ ಮತ್ತು ಔಷಧ ಅಂಗಡಿಯ ಬೀಗ ಮುರಿದಿರುವುದು ಪತ್ತೆಯಾಗಿದೆ. ಆದರೆ, ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ವಾಮಿ ವಿವೇಕಾನಂದ ಚಾರಿಟೆಬಲ್ ಟ್ರಸ್ಟ್‌‌ಗೆ ಸೇರಿದ ಮಿನಿ ಬಸ್ ಗಾಜು ಹೊಡೆದ ಕಳ್ಳರು, ಬಸ್‌ ಒಳಗಿದ್ದ ರಾಡ್, ಟೂಲ್ ಕಿಟ್ ಕದ್ದಿರುವ ಪ್ರಕರಣವೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.