ADVERTISEMENT

ಕಲಬುರಗಿ: ಮಣಪ್ಪುರಂ ಫೈನಾನ್ಸ್‌ಗೆ ₹68.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 4:20 IST
Last Updated 5 ನವೆಂಬರ್ 2024, 4:20 IST
<div class="paragraphs"><p>ವಂಚನೆ</p></div>

ವಂಚನೆ

   

ಕಲಬುರಗಿ: ಮಣಪ್ಪುರಂ ಫೈನಾನ್ಸ್‌ ಕಂಪನಿಯ ಮಣಪ್ಪುರಂ ಶಿಕ್ಷಕರ ಸಾಲ ಯೋಜನೆಯಡಿ ಶಾಲೆಗಳಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ಸಲ್ಲಿಸಿ ₹68.50 ಲಕ್ಷ ಸಾಲ ಪಡೆದು ವಂಚಿಸಿದ ಆರೋಪದಲ್ಲಿ 25 ಮಂದಿ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಪ್ಪುರಂ ಫೈನಾನ್ಸ್‌ನ ಓಂ ನಗರ ಶಾಖೆ ಮ್ಯಾನೇಜರ್ ಷಣ್ಮುಖ ಪವಾರ್ ಅವರು ಅನಿಸಾ ಬೇಗಂ, ಫರೀದಾ ಬೇಗಂ, ನೇಹಾ ಸಮರೀನ್, ಶಾರದಾ ಸಂಜು, ಫಾತಿಮಾ ಬೇಗಂ, ಹೀನಾ ಕೌಸರ್, ಸೈಯದ್ ಜಹೀರ್ ಅಹ್ಮದ್ ಖಾದ್ರಿ, ಗೌಸಿಯಾ ರೆಬೀನಾ, ತಬಸುಮ್ ಬೇಗಂ ಸೇರಿ 25 ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ADVERTISEMENT

ಮಾಲಿಕ್ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ಜೀನಿಯಸ್ ಅಕಾಡೆಮಿ ಪ್ರೀ ಪ್ರೈಮರಿ ಸ್ಕೂಲ್, ಎಫ್‌ಕೆ ಎಜುಕೇಶನಲ್ ಹಬ್ ಹಾಗೂ ಗುಲಬರ್ಗಾ ಶಾಲೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಮಣಪ್ಪುರಂ ಶಿಕ್ಷಕರ ಸಾಲ ಯೋಜನೆಯಡಿ ₹68.50 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.