ADVERTISEMENT

ಕಲಬುರಗಿ: ಜಾತ್ರಾ ಮೈದಾನದಲ್ಲಿ ಪಟಾಕಿ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:05 IST
Last Updated 27 ಅಕ್ಟೋಬರ್ 2024, 14:05 IST
ರೇವಣಸಿದ್ದಪ್ಪ ಪಡಶೆಟ್ಟಿ
ರೇವಣಸಿದ್ದಪ್ಪ ಪಡಶೆಟ್ಟಿ   

ಕಲಬುರಗಿ: ದೀಪಾವಳಿ ಹಬ್ಬದ ಪ್ರಯುಕ್ತ ಅ.28ರಿಂದ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಪಟಾಕಿ ಮಾರಾಟ ಮಾಡಲಾಗುವುದು ಎಂದು ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಪಡಶೆಟ್ಟಿ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕಾಶಿಯಿಂದ ಪಟಾಕಿ ತರಿಸಲಾಗುತ್ತಿದೆ. ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆ. ಒಟ್ಟು 40 ಪಟಾಕಿ ಮಳಿಗೆಗಳನ್ನು ಸ್ಥಾಪಿಸುತ್ತಿದ್ದು, ನ.15ರವರೆಗೆ ಮಾರಾಟ ಮಾಡಲು ಅವಕಾಶ ಕೇಳಲಾಗಿದೆ’ ಎಂದರು.

‘ಪರವಾನಗಿ ಇಲ್ಲದೆ ಪಟಾಕಿ ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಸರ್ಕಾರದ ನಿರ್ದೇಶನದಂತೆ ಸಂಪೂರ್ಣವಾಗಿ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರು ಖರೀದಿಸಬಹುದು. ಖರೀದಿಗೆ ಬರುವಾಗ ಪ್ಲಾಸ್ಟಿಕ್‌ ರಹಿತ ಕೈಚೀಲ ತರಬೇಕು’ ಎಂದು ಮನವಿ ಮಾಡಿದರು.

ADVERTISEMENT

ಶಿವಶರಣಪ್ಪ ಹೂಗಾರ, ಚಂದ್ರಕಾಂತ ಚವ್ಹಾಣ, ವಿಶ್ವನಾಥ ಸಾಲಿಮಠ, ಪಿಂಟು ಸ್ವಾಮಿ, ಜಯಂತ ಕಂದೂರ, ಸಂತೋಷ ಪಾಟೀಲ, ಚನ್ನವೀರ ಲಿಂಗನವಾಡಿ, ಮನೀಷ್ ಕಂಡಗಂಚಿ, ಅಶೋಕ ಮಾನಕರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.