ADVERTISEMENT

ಸನ್ನತಿ ಶಾಲಾ ಕಟ್ಟಡ ಶಿಥಿಲ: ಮರದ ನೆರಳಲ್ಲಿ ಮಕ್ಕಳಿಗೆ ಪಾಠ, ಮಳೆ ಬಂದರೆ ರಜೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:30 IST
Last Updated 9 ಜೂನ್ 2022, 19:30 IST
1.ವಾಡಿ ಸಮೀಪದ ಸನ್ನತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕಿತ್ತು ಬಿದ್ದಿರುವುದು. 2. ಮೇಲ್ಛಾವಣಿಯಿಂದ ನೀರು ಸೋರುತ್ತಿರುವುದು. 3.ಮರದ ಕೆಳಗೆ ಪಾಠ ಕೇಳುತ್ತಿರುವ ಶಾಲಾ ಮಕ್ಕಳು
1.ವಾಡಿ ಸಮೀಪದ ಸನ್ನತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕಿತ್ತು ಬಿದ್ದಿರುವುದು. 2. ಮೇಲ್ಛಾವಣಿಯಿಂದ ನೀರು ಸೋರುತ್ತಿರುವುದು. 3.ಮರದ ಕೆಳಗೆ ಪಾಠ ಕೇಳುತ್ತಿರುವ ಶಾಲಾ ಮಕ್ಕಳು   

ಸನ್ನತಿ (ವಾಡಿ): ಜಿಲ್ಲೆಯ ಗಡಿಗ್ರಾಮ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಪರಿಣಾಮ ಪ್ರಾಣಾಪಾಯದ ಭೀತಿಯಿಂದ ಶಾಲೆಯ ನೂರಾರು ಮಕ್ಕಳು ಮರದ ಕೆಳಗೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ.

ಶಾಲೆಯ ಏಳು ಕೊಠಡಿಗಳಲ್ಲಿ 1ರಿಂದ 8ರವರೆಗೆ ತರಗತಿಗಳು ನಡೆಯು ತ್ತಿದ್ದು, 280ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ಧಾರೆ. ಆದರೆ ಶಾಲಾ ಕೋಣೆಗಳು ಸುಸ್ಥಿತಿಯಲ್ಲಿ ಇರದ ಕಾರಣ ಮಕ್ಕಳ ಕಲಿಕಾಭ್ಯಾಸಕ್ಕೆ ತೀವ್ರ ಹಿನ್ನಡೆಯಾಗಿದೆ. ಏಳು ಕೋಣೆಗಳ ಪೈಕಿ ನಾಲ್ಕು ಕೋಣೆಗಳು ಸಂಪೂರ್ಣ ಹಾಳಾಗಿದ್ದು, ಈ ಕೋಣೆಗಳಲ್ಲಿ ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ಉಳಿದ ಮೂರು ಕೋಣೆಗಳಲ್ಲಿ ಒಂದು ಬಿಸಿಯೂಟಕ್ಕೆ ಬಳಕೆಯಾದರೆ ಇನ್ನೊಂದು ಕಚೇರಿ ನಿರ್ವಹಣೆಗೆ ಬಳಕೆಯಾಗುತ್ತಿದೆ.

ಶಾಲೆಯ ಕೋಣೆಗಳ ಮೇಲ್ಚಾವಣಿ ಸಿಮೆಂಟ್ ಕಿತ್ತು ಬೀಳುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ಶಾಲಾ ಕೋಣೆಗಳು ಸೋರುವುದರಿಂದ ಪಾಠಕ್ಕೆ ಪೂರ್ಣವಿರಾಮ ಹೇಳುವ ದುಸ್ಥಿತಿ ತಲೆದೂರಿದೆ. ವಿದ್ಯಾರ್ಥಿಗಳು ಸಂಪೂರ್ಣ ಹಾಳಾದ ಕೋಣೆಗಳಲ್ಲೇ ಭಯದ ನಡುವೆ ಪಾಠ ಕೇಳುವಂತಾಗಿದೆ. ಶಾಲಾ ಕೋಣೆಗಳ ಸಮಸ್ಯೆ ಪರಿಹರಿಸಿ ಮಕ್ಕಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಮೇಲ್ಚಾವಣಿಯ ಸಿಮೆಂಟ್ ಪದೇ ಪದೇ ಕಳಚಿ ಬೀಳುತ್ತಿದ್ದು, ಮಕ್ಕಳನ್ನು ಕೋಣೆಯೋಳಗೆ ಕೂಡಿಸಲು ಶಿಕ್ಷಕರು ಹೆದರುತ್ತಿದ್ದಾರೆ. ಮಳೆ ಬಂದರೆ ಮೇಲ್ಚಾವಣಿ ಮೂಲಕ ಕೋಣೆಯೊಳಗೆ ನೀರು ತೊಟ್ಟಿಕ್ಕುತ್ತದೆ. ಹೀಗಾಗಿ ಮಳೆ ಬಂದರೆ ಪಾಠಗಳಿಗೆ ಪೂರ್ಣ ವಿರಾಮ ಹೇಳುವುದು ಅನಿವಾರ್ಯವಾಗಿದೆ. ಈಚೆಗೆ ನಿರ್ಮಿಸಿದ ಎರಡು ಕೋಣೆಗಳು ಸಹ ಕಳಪೆ ಕಾಮಗಾರಿಯಿಂದ ಸುಸ್ಥಿತಿ ಯಲ್ಲಿ ಇಲ್ಲ.

ಶಾಲೆಯ ಒಟ್ಟಾರೆ ಹಳೆಯ ಎಲ್ಲಾ ಕೋಣೆಗಳನ್ನು ನೆಲಸಮಗೊಳಿಸಿ ಹೊಸ ಕೋಣೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.