ADVERTISEMENT

‘ಸ್ಮಾರ್ಟ್‌ ಸಿಟಿಜನ್‌’ ಗಳ ಸದ್ದಿಲ್ಲದ ಸೇವೆ

ಹಿರಿಯ ನಾಗರಿಕರ ಕಾರ್ಯಕ್ಕೆ ಪಾಲಿಕೆ ಆಯುಕ್ತರ ಮೆಚ್ಚುಗೆ

ಕಿರಣ ನಾಯ್ಕನೂರ
Published 23 ಆಗಸ್ಟ್ 2023, 7:10 IST
Last Updated 23 ಆಗಸ್ಟ್ 2023, 7:10 IST
ಸ್ವಾರ್ಟ್‌ಸಿಟಿ ಕ್ಲಬ್ ವಾಟ್ಸ್‌ಆ್ಯಪ್ ಬಳಗದಲ್ಲಿ ಬಂದ ಸಮಸ್ಯೆಯ ಮಾಹಿತಿ
ಸ್ವಾರ್ಟ್‌ಸಿಟಿ ಕ್ಲಬ್ ವಾಟ್ಸ್‌ಆ್ಯಪ್ ಬಳಗದಲ್ಲಿ ಬಂದ ಸಮಸ್ಯೆಯ ಮಾಹಿತಿ   

ಕಲಬುರಗಿ: ರಿಟೈರ್ಡ್‌ ಆಯ್ತು ಮಕ್ಕಳ ಮನೇಲಿ ಮೊಮ್ಮಕ್ಕಳ ಜತೆ ಆಟ ಆಡ್ಕೊಂಡ ಅರಾಮ ಇದ್ದಬಿಡೋಣ ಎನ್ನುವವರೇ ಹೆಚ್ಚಿರುವಾಗ 35ಕ್ಕೂ ಹೆಚ್ಚು ಹಿರಿಯ ನಾಗರಿಕರು ‘ಸ್ಮಾರ್ಟ್‌ ಸಿಟಿ ಕ್ಲಬ್‌’ ಎನ್‌ಜಿಒ (ಲಾಭ ರಹಿತ ಸೇವಾ ಸಂಸ್ಥೆ) ಮೂಲಕ ಕಳೆದ ಐದು ವರ್ಷಗಳಿಂದ ನಗರದಲ್ಲಿ ಎಲೆಮರೆ ಕಾಯಿಯಂತೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಮಾರ್ಟ್‌ ಸಿಟಿ ಕ್ಲಬ್‌’ 2020ರಲ್ಲಿ ನೋಂದಣಿಯಾಗಿದೆ. ಇದೇ ಹೆಸರಿನಲ್ಲಿ ಒಂದು ವಾಟ್ಸ್‌ಆ್ಯಪ್‌ ಬಳಗ ಮಾಡಿಕೊಂಡಿದ್ದು ನಗರದ ಜನಸಾಮಾನ್ಯರೂ ಸೇರಿದಂತೆ ಕ್ಲಬ್‌ನ ಸದಸ್ಯರಿದ್ದಾರೆ.

ನಗರದ ವಿವಿಧ ಬಡಾವಣೆಗಳ ಜನರು ತಮ್ಮ ಪ್ರದೇಶ ಸೇರಿದಂತೆ ನಗರದಲ್ಲಿ ಮೂಲಸೌಲಭ್ಯಗಳ ಸಮಸ್ಯೆ ಇದ್ದರೆ ಅದರ ಫೋಟೋವನ್ನು ಚಿಕ್ಕ ಮಾಹಿತಿ, ಸ್ಥಳದ ಗುರುತಿನ ಸಮೇತ (ಗೂಗಲ್ ಮ್ಯಾಪ್) ಬಳಗದಲ್ಲಿ ಹಾಕುತ್ತಾರೆ. ಹೀಗೆ ಬಂದ ಮಾಹಿತಿ ಮತ್ತು ಫೋಟೋವನ್ನು ಬಳಗದಲ್ಲಿರುವ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಕಳಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರೆ.

ADVERTISEMENT

‘ನಾವು 2018ರಿಂದಲೇ ಸೇವಾಕಾರ್ಯದಲ್ಲಿ ನಿರತರಾಗಿದ್ದೇವು. ಕ್ಲಬ್‌ಗೆ ಪಿ.ಎಸ್‌.ಮಹಾಗಾಂವಕರ್‌ ಅಧ್ಯಕ್ಷರಾಗಿದ್ದು ಸದ್ಯ 40 ಸ್ವಯಂ ಸೇವಕರಿದ್ದೇವೆ. ನೋಂದಾಯಿತ ಎನ್‌ಜಿಒ ಸೇರಿಕೊಳ್ಳಲು ₹ 500 ಸದಸ್ಯತ್ವ ಶುಲ್ಕ ನಿಗದಿ ಮಾಡಿದ್ದೇವೆ. ಎಲ್ಲರೂ ಚುರುಕಿನಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕ್ಲಬ್‌ಗಾಗಿ ಸಮಯ ಕೊಡುವವರನ್ನೇ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ವ್ಯಾಟ್ಸ್‌ಆ್ಯಪ್‌ ಬಳಗದಲ್ಲಿ ಭರ್ತಿಯಾಗಿದ್ದು ‘ನನ್ನನ್ನು ಬಳಕ್ಕೆ ಸೇರಿಸಿಕೊಳ್ಳಿ’ ಎನ್ನುವ ಸಂದೇಶಗಳು ದಿನವೂ ನನಗೆ ಬರುತ್ತವೆ. ಯಾರು ಸಕ್ರಿಯವಾಗಿಲ್ಲವೋ ಅಂಥವರನ್ನು ತೆಗೆದು ಬೇರೆಯವರನ್ನು ಸೇರಿಸುತ್ತೇವೆ. ಇಲ್ಲದಿದ್ದರೆ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತೇವೆ’ ಎನ್ನುತ್ತಾರೆ ಕ್ಲಬ್ ಸಂಚಾಲಕಿ ನಳಿನಿ ಮಹಾಗಾಂವಕರ್‌.

ಈಚೆಗೆ ಕನ್ನಡ ಭವನದಲ್ಲಿ ನಡೆದ ಸ್ವಾರ್ಟ್‌ಸಿಟಿ ಕ್ಲಬ್‌ನ ಮೂರನೇ ವಾರ್ಷಿಕೋತ್ಸವ ಸಮಾರಂಭ ಭಾಗಿಯಾದ ಸದಸ್ಯರು
ನಳಿನಿ ಮಹಾಗಾಂವಕರ್
ಭುವನೇಶ ಪಾಟೀಲ
ನಮ್ಮ ಸ್ವಾರ್ಟ್‌ ಸಿಟಿ ಕ್ಲಬ್ ವಾಟ್ಸ್‌ಆ್ಯಪ್‌ ಬಳಗ ಸೇರಲು ಹೆಚ್ಚು ಬೇಡಿಕೆ ಅಷ್ಟೇ ಅಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿ ಬೀದಿ ದೀಪದಂತ ಹ ಸಣ್ಣಪುಟ್ಟ ಸಮಸ್ಯೆಗಳು ನಿವಾರಣೆಯಾಗಿವೆ
ನಳಿನಿ ಮಹಾಗಾಂವಕರ್‌ ಸಂಚಾಲಕಿ ಸ್ಮಾರ್ಟ್‌ ಸಿಟಿ ಕ್ಲಬ್
ನಾನೂ ಸ್ವಾರ್ಟ್‌ ಸಿಟಿ ಕ್ಲಬ್ ವಾಟ್ಸ್‌ಆ್ಯಪ್‌ ಬಳಗದಲ್ಲಿದ್ದು ಹಿರಿಯರ ಉತ್ಸಾಹ ನೋಡಿ ಬಹಳ ಖುಷಿಯಾಗುತ್ತದೆ. ಸಾಧ್ಯವಾದಷ್ಟು ನಾವೂ ಸ್ಪಂದಿಸುತ್ತಿದ್ದೇವೆ
ಭುವನೇಶ ಪಾಟೀಲ ಆಯುಕ್ತ ಮಹಾನಗರ ಪಾಲಿಕೆ

ಬಳಗಲ್ಲಿದ್ದಾರೆ ಆಯುಕ್ತರು ಅಧಿಕಾರಿಗಳು ‘ಸ್ಮಾರ್ಟ್‌ ಸಿಟಿ ಕ್ಲಬ್‌’ ವ್ಯಾಟ್ಸ್‌ಅಪ್‌ ಬಳಗದಲ್ಲಿ ಅದರ ಸ್ವಯಂಸೇವರಷ್ಟೇ ಅಲ್ಲದೆ ನಗರಸಭೆ ಆಯುಕ್ತ ಭುವನೇಶ ಪಾಟೀಲ ಇದ್ದಾರೆ. ಜೆಸ್ಕಾಂ ಜಲಮಂಡಳಿ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದಾರೆ. ‘ನಮ್ಮ ವ್ಯಾಟ್ಸ್‌ಅಪ್‌ ಬಳಗ ಸೇರುವಂತೆ ಆಯುಕ್ತರಿಗೆ ಮನವಿ ಮಾಡಿದಾಗ ಖುಷಿಯಿಂದಲೇ ಒಪ್ಪಿಕೊಂಡರು. ಅಧಿಕಾರಿಗಳು ಸಹ ತ್ವರಿತವಾಗಿ ಸ್ಪಂದಿಸುತ್ತಾರೆ. ದೊಡ್ಡ ಕೆಲಸಗಿಳಿದ್ದರೆ ಆಡಳಿತ ಮತ್ತು ಹಣಕಾಸಿನ ಒಪ್ಪಿಗೆ ಸೇರಿ ಇತರ ತೊಡಕುಗಳಿರುವುದರಿಂದ ಅವು ಸಾಧ್ಯವಾಗುವುದಿಲ್ಲ. ಆದರೆ ತ್ಯಾಜ್ಯ ವಿಲೇವಾರಿ ರಸ್ತೆಯಲ್ಲಿನ ತಗ್ಗು ಮುಚ್ಚಿಸುವುದು ಬೀದಿ ದೀಪ ನೀರು ಸಮಸ್ಯೆ ಸೇರಿ ಸಣ್ಣ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡಲು ಅಧಿಕಾರಿಗಳು ನೆರವಾಗುತ್ತಿದ್ದಾರೆ’ ಎಂದು ತಮ್ಮ ಬಳಗ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಳಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.