ADVERTISEMENT

ಶಹಾಬಾದ್‌: ತಾಲ್ಲೂಕು ಕಸಾಪ ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:28 IST
Last Updated 26 ಅಕ್ಟೋಬರ್ 2024, 15:28 IST
ಶಹಾಬಾದ್‌ ತಾಲ್ಲೂಕಿನ ಪ್ರಥಮ ಕಸಾಪ ಸಮ್ಮೇಳನದ ಸಿದ್ಧತೆಯ ಪೂರಕವಾಗಿ ಸರ್ವ ಸದಸ್ಯರು ಮತ್ತು ಮುಖಂಡರು ಸಭೆ ನಡೆಸಿದರು
ಶಹಾಬಾದ್‌ ತಾಲ್ಲೂಕಿನ ಪ್ರಥಮ ಕಸಾಪ ಸಮ್ಮೇಳನದ ಸಿದ್ಧತೆಯ ಪೂರಕವಾಗಿ ಸರ್ವ ಸದಸ್ಯರು ಮತ್ತು ಮುಖಂಡರು ಸಭೆ ನಡೆಸಿದರು   

ಶಹಾಬಾದ್: ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ. ಪಕ್ಷ, ಜಾತಿ, ಧರ್ಮ ಹೊರತುಪಡಿಸಿ ಕನ್ನಡ ಸಾಹಿತ್ಯ ಸಂಸ್ಕೃತಿ ಚರಿತ್ರೆಯನ್ನು ಎಲ್ಲರ ಮನಸ್ಸಿನಲ್ಲಿ ಮೂಡುವ ಹಾಗೆ ಹೊಸ ಹುರುಪಿನಿಂದ ಸಂಘಟಿಸಲು ಎಲ್ಲರೂ ಸಹಾಯ, ಸಹಕಾರಕ್ಕೆ ಮುಂದೆ ಬರಬೇಕು’ ಎಂದು ನಗರದ ಮುಖಂಡ ಮರಿಯಪ್ಪ ಹಳ್ಳಿ ಹೇಳಿದರು.

ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸಮ್ಮೇಳನದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹಾಗೂ ಸ್ವಾಗತ ಸಮಿತಿ, ಇತರೆ ಸಮಿತಿಗಳನ್ನು ರಚಿಸಿ ಅಚ್ಚುಕಟ್ಟಾಗಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು. ಯಾವುದೇ ಅಪಸ್ವರ ಬಾರದ ಹಾಗೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು, ಸಮ್ಮೇಳನವನ್ನು ನಿಯಮಾನುಸಾರವಾಗಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ’ ಎಂದರು.

ADVERTISEMENT

ರವಿ ಅಲ್ಲಮ್ಮಶೆಟ್ಟಿ, ಮೃತ್ಯುಂಜಯ ಹಿರೇಮಠ, ಅಣವೀರ ಇಂಗಿನಶೆಟ್ಟಿ, ಸಿದ್ದಲಿಂಗ ಬಾಳಿ, ನಾಗಣ್ಣ ರಾಂಪುರ, ಗುಂಡಮ್ಮ ಮಡಿವಾಳ, ರೇವಮ್ಮ ಗುರ್ಜಲ್ಕರ್, ಭಾರತ ದನ್ನಾ, ಶರಣು ಪಗಲಾಪುರ ಸೇರಿದಂತೆ ಹಲವರು ಸಭೆಯಲ್ಲಿ ಸಲಹೆಗಳನ್ನು ನೀಡಿದರು.

ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿದರು.

ಕಾಡಾ ಅಧ್ಯಕ್ಷ ಡಾ. ಎಂ.ಎ ರಶೀದ್, ಕನಕಪ್ಪ ದಂಡಗುಳ್ಕರ, ಅನಿಲಕುಮಾರ ಇಂಗಿನಶೆಟ್ಟಿ, ರಾಜು ಮೇಸ್ತ್ರಿ, ನಿಂಗಣ್ಣ ಹುಳುಗೋಳ್ಕರ, ಶರಣಗೌಡ ಪಾಟೀಲ, ನಿಂಗಣ್ಣ ಪೂಜಾರಿ, ಶಂಕರ ಜಾನ, ಪೂಜಪ್ಪ ಮೈತ್ರಿ, ಪೀರ ಪಾಶಾ, ಕಳ್ಳೋಳಿ ಕುಸಾಳೆ, ಗಿರಿಮಲ್ಲಪ್ಪ ವಳಸಂಗ, ಶಿವರಾಜ ಇಂಗಿನಶೆಟ್ಟಿ, ಯಲ್ಲಾಲಿಂಗ ಹಯ್ಯಾಳಕರ, ಶಿವಕುಮಾರ ದೊರೆ, ಕಸಾಪದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ಶರಣು ವಸ್ತ್ರದ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.