ADVERTISEMENT

ಶಿವಸೇನಾ ದಸರಾ ಉತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 16:12 IST
Last Updated 6 ಅಕ್ಟೋಬರ್ 2024, 16:12 IST

ಸೇಡಂ: ‘ಪಟ್ಟಣದ ಚೌರಸ್ತಾ ಬಳಿ ಅಕ್ಟೋಬರ್ 7ರಿಂದ 12ರವರೆಗೆ ಶಿವಸೇನಾ ಉತ್ಸವ ಸಮಿತಿಯಿಂದ ದಸರಾ ಉತ್ಸವ ಮತ್ತು ಲಕ್ಷ ದೀಪೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ’ ಎಂದು ಶಿವಸೇನಾ ದಸರಾ ಉತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಜೀವಣಗಿ ತಿಳಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಂದು ಸಂಜೆ 7ಗಂಟೆಗೆ ಜಗದಶಾಂತಿ ಧಾಮದ ಮಾತೆ ಜಗದೇವಮ್ಮನವರ ಸಾನ್ನಿಧ್ಯದಲ್ಲಿ ದೇವಿಯ ಘಟಸ್ಥಾಪನೆ ಮಾಡಲಾಗುತ್ತದೆ. 8ರಂದು ಸಂಜೆ 7ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಧರ್ಮಸ್ಥಳ ತಾಲ್ಲೂಕು ಯೋಜನಾಧಿಕಾರಿ ಮಂಜುನಾಥ ಎಸ್.ಜಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ರವಿಂದ್ರ ದೊಂತಾ, ರಾಜಶೇಖರರೆಡ್ಡಿ ಹೈಯ್ಯಾಳ, ರಾಘವೇಂದ್ರ ಮೆಕ್ಯಾನಿಕ್ ಆಗಮಿಸಲಿದ್ದಾರೆ. ಶಿವಸೇನಾ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರಾಜೇಂದ್ರ ಬಾಗೋಡಿ ಉಪಸ್ಥಿತರಿರಲಿದ್ದಾರೆ’ ಎಂದರು.

ADVERTISEMENT

‘9ರಂದು ಸಂಜೆ 7.35ಕ್ಕೆ ಬಿಜಾಪುರ ಗಿರಿ ಸಾಗರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಸಿಪಿಐ ಮಹಾದೇವ ದಿಡ್ಡಿಮನಿ ಉದ್ಘಾಟಿಸುವರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಚಕ್ರಪಾಣಿ ಕುಲಕರ್ಣಿ, ಡಾ.ಶ್ರೀನಿವಾಸ ಮೊಕದಮ್, ರಾಮರೆಡ್ಡಿ ಪಾಟೀಲ, ಅಶೋಕ ಪವಾರ ಆಗಮಿಸಲಿದ್ದಾರೆ. ದಸರಾ ಉತ್ಸವ ಸಮಿತಿ ಸದಸ್ಯ ಸುರೇಶ ಊಡಗಿ ಅಧ್ಯಕ್ಷ ವಹಿಸಲಿದ್ದಾರೆ’ ಎಂದು ಹೇಳಿದರು.

10ರಂದು 7.05ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಡಾ.ಸಾಬಯ್ಯ ಭೋವಿ, ಸೈಜಾದಭೀ ನಾಡೆಪಲ್ಲಿ, ಮಹ್ಮದ್ ಹಫೀಜ್, ಜಗನ್ನಾಥ ಗುಡ್ಡದ್, ದೀಪಕ ಬಾಗೋಡಿ ಉಪಸ್ಥಿತರಿರುವರು. 11ರಂದು ಮಧ್ಯಾಹ್ನ 1ಗಂಟೆಗೆ ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ ವೈದ್ಯೆ ಡಾ.ಭಾಗ್ಯಶ್ರೀ ಪಾಟೀಲ, ಸಂತೋಷಿರಾಣಿ ಪಾಟೀಲ, ಪಲ್ಲವಿ ಗುತ್ತೇದಾರ ಆಗಮಿಸಲಿದ್ದಾರೆ. ನಂತರ ಸಂಜೆ 4.30ಕ್ಕೆ ಲಕ್ಷ ದೀಪೋತ್ಸವ ನಡೆಯಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೇಡಂನ ಶಿವಶಂಕರ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ಸದಾಶಿವ ಸ್ವಾಮೀಜಿ ಮತ್ತು ಜಗದೇವಮ್ಮ ತಾಯಿ, ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ರಾಜಕುಮಾರ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ, ಭೀಮಾಶಂಕರ ಕೊಳ್ಳಿ, ಸಂತೋಷ ತಳವಾರ, ಶಿವಕುಮಾರ ಉಪಸ್ಥಿತರಿರಲಿದ್ದಾರೆ. ಅ.12ರಂದು ದೇವಿ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ಸಿಮೋಲಂಘನ ಜಗುಲಿದೆ’ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ತಳವಾರ, ಅಭಿಷೇಕ ಬಾಗೋಡಿ, ರಾಜಕುಮಾರ ಚೆನ್ನಕ್ಕಿ, ಲಕ್ಷ್ಮಣ ಭೋವಿ, ಸುರೇಶ ಊಡಗಿ, ಆಕಾಶ, ಶಂಕರ ಠಕಾರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.