ಕಲಬುರ್ಗಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸವಿತಾ ಮಹರ್ಷಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಹೆಚ್ಚುವರಿಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಆರ್.ಬಿ. ಜಗದಾಳೆ, ಗೌರವಾಧ್ಯಕ್ಷ ದಿನಕರ ಮೋರೆ, ಕಾರ್ಯದರ್ಶಿ ಕೈಲಾಸ ಮೊರೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಸಲಹಾ ಸಮಿತಿಯ ಸದಸ್ಯರಾದ ಸೂರ್ಯಕಾಂತ ಕದಮ್, ಸುವರ್ಣಾ ಶಿಂಧೆ ಹಾಗೂ ಸಾಹಿತಿ ಚಿ.ಸಿ. ನಿಂಗಣ್ಣ ಇದ್ದರು.
ಸವಿತಾ ಸಮಾಜದ ಅಧ್ಯಕ್ಷ ಸುಭಾಷ ಬಿ. ಬಾದಾಮಿ, ಗೌರವಾಧ್ಯಕ್ಷ ಅಂಬರೇಶ ಮಂಗಲಗಿ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಸೂರ್ಯವಂಶಿ, ಶಂಕರ ಕಾಳನೂರು ಸೇರಿದಂತೆ ಮರಾಠ ಹಾಗೂ ಸವಿತಾ ಸಮಾಜದ ಮುಖಂಡರು
ಇದ್ದರು.
ಇದಕ್ಕೂ ಮುನ್ನ ನಗರದ ಜಗತ್ ವೃತ್ತದಲ್ಲಿಎ.ಎಸ್. ಪಾರ್ಟನರ್ಸ್ ಅಂಡ್ ಟೀಂ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ 50 ಅಡಿ ಎತ್ತರದ ಬೃಹತ್ ಪ್ಲೆಕ್ಸ್ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.