ADVERTISEMENT

ಕಲಬುರಗಿ ಕಾರಾಗೃಹದಲ್ಲಿ ಸ್ಮಾರ್ಟ್‌ಫೋನ್ ಬಳಕೆ: ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 1:05 IST
Last Updated 19 ಅಕ್ಟೋಬರ್ 2024, 1:05 IST
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೂವರು ಕೈದಿಗಳು ಸ್ಮಾರ್ಟ್‌ಫೋನ್ ಬಳಸಿ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿದ್ದಾರೆ ಎನ್ನಲಾದ ದೃಶ್ಯ
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮೂವರು ಕೈದಿಗಳು ಸ್ಮಾರ್ಟ್‌ಫೋನ್ ಬಳಸಿ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿದ್ದಾರೆ ಎನ್ನಲಾದ ದೃಶ್ಯ   

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಂದ ಸ್ಮಾರ್ಟ್‌ಫೋನ್‌ ಬಳಕೆ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿರುವ ಜೈಲಿನ ಕೈದಿಯೊಬ್ಬರ ಫೋನ್‌ ಕರೆಯ ಸಂಭಾಷಣೆ ಘಟನೆಗಳ ಕುರಿತು ಕಾರಾಗೃಹ ಇಲಾಖೆಯ ಎಸ್‌ಪಿ ಯಶೋಧಾ ವಂಟಗೋಡಿ ಶುಕ್ರವಾರ ತನಿಖೆ ಆರಂಭಿಸಿದ್ದಾರೆ.

ಮಧ್ಯಾಹ್ನದ 12 ಗಂಟೆ ಸುಮಾರಿಗೆ ಬಂದ ಕೇಂದ್ರ ಕಾರಾಗೃಹಕ್ಕೆ ಬಂದ ಯಶೋಧಾ ವಂಟಗೋಡಿ ಅವರು ಉಭಯ ಘಟನೆಗಳ ಕುರಿತು ಸಂಬಂಧಿಸಿದವರಿಂದ ದಿನವಿಡೀ ಪ್ರಾಥಮಿಕ ಮಾಹಿತಿ ಕಲೆ ಹಾಕಿದರು.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಯಶೋಧಾ, ‘ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ಬಂದಿರುವೆ. ಪ್ರಾಥಮಿಕ ತನಿಖೆ ಕಲೆ ಹಾಕಿ, ಒಂದು ವಾರದಲ್ಲಿ ನಮ್ಮ ಇಲಾಖೆಯ ಡಿಜಿಗೆ ವರದಿ ನೀಡುವೆ’ ಎಂದರು.

ADVERTISEMENT

ಮತ್ತೊಂದೆಡೆ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್‌, ಸಿಗರೇಟ್‌, ಗುಟ್ಕಾ ಪತ್ತೆಯಾದ ಪ್ರಕರಣವನ್ನು ಕಲಬುರಗಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್.ಡಿ. ಅವರು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.