ADVERTISEMENT

ಕಲಬುರಗಿ– ಬೆಂಗಳೂರು: ವಿಶೇಷ ಎಕ್ಸ್‌ಪ್ರೆಸ್ ರೈಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:54 IST
Last Updated 24 ಅಕ್ಟೋಬರ್ 2024, 15:54 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಕಲಬುರಗಿ: ದೀಪಾವಳಿ ಹಬ್ಬದ ಅಂಗವಾಗಿ ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ನಿಲ್ದಾಣದಿಂದ ಕಲಬುರಗಿ ರೈಲು ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಕಲ್ಪಿಸಿದೆ.

ADVERTISEMENT

ಅಕ್ಟೋಬರ್ 31ರಂದು ಎಸ್‌ಎಂವಿಟಿ ಬೆಂಗಳೂರು– ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು (06217) ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.40ಕ್ಕೆ ಕಲಬುರಗಿ ರೈಲು ನಿಲ್ದಾಣ ತಲುಪಲಿದೆ.

ನವೆಂಬರ್ 1ರಂದು 06218 ಸಂಖ್ಯೆಯ ರೈಲು ಕಲಬುರಗಿಯಿಂದ ಬೆಳಿಗ್ಗೆ 9.35ಕ್ಕೆ ಹೊರಟು, ರಾತ್ರಿ 8ಕ್ಕೆ ಬೆಂಗಳೂರು ಎಸ್‌ಎಂವಿಟಿ ತಲುಪಲಿದೆ. ಯಲಹಂಕ, ಧರ್ಮವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಹಾಗೂ ಶಹಾಬಾದ್‌ನಲ್ಲಿ ನಿಲುಗಡೆಯಾಗಲಿದೆ.

ಪ್ರಯಾಣಿಕರು www.enquiry.indianrail.gov.in ಅಥವಾ NTES ಅಪ್ಲಿಕೇಷನ್ ಅಥವಾ 139 ಸಂಖ್ಯೆ ಕರೆ ಮಾಡಿ ಇತರೆ ವಿವರ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.