ಕಲಬುರ್ಗಿ: ಹಣಕ್ಕಾಗಿ ಗಂಡನ ಮನೆಯವರ ಕಿರುಕುಳ ತಾಳಲಾರದೇ ಸ್ಟಾಫ್ ನರ್ಸ್ ಒಬ್ಬರು ಇಲ್ಲಿನ ಶಿವಾಜಿ ನಗರದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಯುಷ್ ಇಲಾಖೆಯಸೇಡಂನ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಇಂದಿರಾ (38) ಆತ್ಮಹತ್ಯೆಗೆ ಶರಣಾದವರು. ತಿಂಗಳಿಗೆ ₹ 50 ಸಾವಿರ ವೇತನ ಪಡೆಯುತ್ತಿದ್ದ ಇಂದಿರಾ ಮೂಲತಃ ರಾಯಚೂರು ನಗರದ ಮಕ್ತಲ್ ಪೇಟದವರು. 2002ರಲ್ಲಿ ಕಲಬುರ್ಗಿಯ ಸಿವಿಲ್ ಗುತ್ತಿಗೆದಾರ ಸಂಜೀವರೆಡ್ಡಿ ಅವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಇದೆ.
ಮತ್ತೊಂದು ಮನೆ ಕಟ್ಟಿಸುತ್ತಿದ್ದು, ಇದಕ್ಕಾಗಿ ಹಣ ತರುವಂತೆ ಸಂಜೀವರೆಡ್ಡಿ ಮತ್ತು ಮನೆಯವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಇಂದಿರಾ ಬುಧವಾರ ರಾತ್ರಿ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದು ನಗರಕ್ಕೆ ಬಂದ ಇಂದಿರಾ ತಾಯಿ ಲೀಲಾವತಿ ಅವರು, ಮಗಳ ಪತಿ ಸಂಜೀವರೆಡ್ಡಿ, ತಾಯಿ ಶಾಂತಾಬಾಯಿ, ತಮ್ಮ ಪರ್ವತರೆಡ್ಡಿ, ತಮ್ಮನ ಪತ್ನಿ ರಾಧಾ ವಿರುದ್ಧ ಇಂದಿರಾ ಅವರ ತಾಯಿ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.