ADVERTISEMENT

ಮಹಾಕಾವ್ಯ, ವಿಜ್ಞಾನ ಹೋಲಿಕೆ ಬೇಡ- ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಎಂ. ಖರ್ಗೆ

₹16.90 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 3:14 IST
Last Updated 28 ಡಿಸೆಂಬರ್ 2021, 3:14 IST
ಚಿತ್ತಾಪುರ ಪಟ್ಟಣದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ₹16.90 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿದರು
ಚಿತ್ತಾಪುರ ಪಟ್ಟಣದ ಸರ್ಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಶಾಲಾ ಕಟ್ಟಡ ನಿರ್ಮಾಣ ಹಾಗೂ ₹16.90 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿದರು   

ಚಿತ್ತಾಪುರ: ದೇಶದಲ್ಲಿ ಇಂದು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಿಗೂ ವಿಜ್ಞಾನದೊಂದಿಗೆ ಹೋಲಿಸುವ ಮತ್ತು ಪ್ರಚುರಪಡಿಸುವ ವಿಚಿತ್ರ ಬೆಳವಣಿಗೆಯಾಗುತ್ತಿದೆ. ಇಂತಹ ಬೆಳೆವಣಿಗೆ ಸಮಾಜಕ್ಕೆ ಮಾರಕವಾಗಿದೆ. ವೈಜ್ಞಾನಿಕತೆಗೆ ತೀರಾ ವಿರುದ್ಧವಾಗಿದೆ ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.

ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಪಟ್ಟಣದಲ್ಲಿ ₹16.90 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಧರ್ಮ, ವಿಜ್ಞಾನ, ಸಂಸ್ಕೃತಿ ಮಿಶ್ರಣ ಮಾಡಿ ಸಮಾಜವನ್ನು ಪುರಾಣಗಳ ಕಾಲಕ್ಕೆ ಹಿಂದಕ್ಕೆ ಕರೆದೊಯುವ ಕೆಲಸ ಮಾಡಲಾಗುತ್ತಿದೆ. ವೈಜ್ಞಾನಿಕತೆ ಬಿತ್ತುವ ಬದಲಿಗೆ ಯಾವುದೊ ಗ್ರಂಥದ ವಿಚಾರಕ್ಕೆ ವಿಜ್ಞಾನದೊಂದಿಗೆ ಹೋಲಿಕೆ ಮಾಡಿ ಧರ್ಮದೊಂದಿಗೆ, ಕಾವ್ಯದೊಂದಿಗೆ ಮಿಶ್ರಣ ಮಾಡಿ ನೋಡುವುದು ಶುದ್ಧ ತಪ್ಪು. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂದು ಅವರು ಹೇಳಿದರು.

ADVERTISEMENT

ಮಕ್ಕಳಲ್ಲಿ ವೈಜ್ಙಾನಿಕ ಮನೋಭಾವ ಬೆಳೆಸಲು ಪಾಲಕರು, ಶಿಕ್ಷಕರು ಮುಂದಾಗಬೇಕು. ವೈಜ್ಞಾನಿಕ ಮನೋಭಾವದಿಂದ ಮಾತ್ರ ವ್ಯಕ್ತಿ, ಸಮಾಜದ, ದೇಶದ ಸಮಗ್ರ ಪರಿವರ್ತನೆ ಸಾಧ್ಯ. ಸರ್ಕಾರ, ಸಮುದಾಯ, ವ್ಯವಸ್ಥೆ ಒಗ್ಗೂಡಿ ಕೆಲಸ ಮಾಡಿದಾಗ ಶೈಕ್ಷಣಿಕವಾಗಿ ಬದಲಾವಣೆ ಕಂಡು ಬರುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತೀತಿಗಳಾಗಿದ್ದ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಪಾಟೀಲ, ಡಿಡಿಪಿಐ ಅಶೋಕ ಭಜಂತ್ರಿ, ಬಿಇಒ ಸಿದ್ಧವೀರಯ್ಯ ರುದ್ನೂರು ಅವರು ಮಾತನಾಡಿದರು.

ತಾ.ಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಮುಖಂಡ ಮುಕ್ತಾರ ಪಟೇಲ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಪಂಚಾಯಿತಿ ಅಧಿಕಾರಿ ನೀಲಗಂಗಾ, ಶಹಾಬಾದ್ ತಹಶೀಲ್ದಾರ್ ಸುರೇಶ ವರ್ಮಾ, ಇಒ ಲಕ್ಷ್ಮಣ್ ಶೃಂಗೇರಿ, ಕಾಳಗಿ ತಹಶೀಲ್ದಾರ್ ನಾಗನಾಥ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನವಕರ್, ಲೋಕೋಪಯೋಗಿ ಇಲಾಖೆ ಎಇಇ ಅಣ್ಣಪ್ಪ ಕುದುರಿ, ಪುರಸಭೆ ಉಪಾಧ್ಯಕ್ಷೆ ಶೃತಿ ಪೂಜಾರಿ, ಸದಸ್ಯರಾದ ರಸೂಲ್ ಮುಸ್ತಫಾ, ವಿನೋದ ಗುತ್ತೆದಾರ್, ಮಲ್ಲಿಕಾಜುನ ಕಾಳಗಿ, ಗೋವಿಂದ ನಾಯಕ, ಶಿವರಾಜ ಪಾಳೇದ್, ಸಂತೋಷ ಚೌಧರಿ,ಶರಣಪ್ಪ ಕೋರವಾರ, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಅಣ್ಣರಾವ ಸಣ್ಣೂರಕರ್, ಬಸವರಾಜ ಪೂಜಾರಿ, ನಾಗುಗೌಡ ಅಲ್ಲುರ್ ಇದ್ದರು.

ಮುಖ್ಯಶಿಕ್ಷಕಿ ಶಿವಮ್ಮ ದೊಡ್ಡಮನಿ ಅವರು ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸಂತೋಷಕುಮಾರ ಶಿರನಾಳ ಅವರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.