ಕಲಬುರಗಿ: ’ಯುಗಾದಿ‘ ಹಬ್ಬದ ಅಂಗವಾಗಿ ಪ್ರಜಾವಾಣಿ ಬಳಗದ ‘ಸುಧಾ’ ವಾರ ಪತ್ರಿಕೆಯು ಹೊರತಂದ 2022ನೇ ಸಾಲಿನ ವಿಶೇಷಾಂಕವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಶನಿವಾರ ಬಿಡುಗಡೆ ಮಾಡಿದರು.
ವಿಶೇಷಾಂಕದ ಪುಟಗಳನ್ನು ತಿರುವಿ ಹಾಕಿದ ಇಶಾ ಪಂತ್, ‘ಹಸಿರು ಕರ್ನಾಟಕ’ ಪರಿಕಲ್ಪನೆಯನ್ನು ಇಟ್ಟುಕೊಂಡು ಈ ಬಾರಿಯ ವಿಶೇಷಾಂಕ ಹೊರತಂದಿರುವುದು ಶ್ಲಾಘನೀಯ. ಬಿಸಿಲಿನ ತಾಪವನ್ನು ಕಡಿಮೆ ಮಾಡಬೇಕೆಂದರೆ ಗಿಡ, ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಈ ರೂಢಿಯನ್ನು ಶಾಲಾ ಹಂತದಿಂದಲೇ ಮಕ್ಕಳಲ್ಲಿ ಮೂಡಿಸಬೇಕು’ ಎಂದರು.
ವಿಶೇಷಾಂಕದಲ್ಲಿ ಏನಿದೆ? ಈ ಬಾರಿಯ ವಿಶೇಷಾಂಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಸಿರು ಬೆಳೆಸಲು ಮುಂದಾದ ಸಾಧಕರ ಬಗ್ಗೆ ವಿವರಗಳಿವೆ. ಬೀದರ್ ಜಿಲ್ಲೆಯಲ್ಲಿನ ಭಾವೈಕ್ಯದ ಕುರುಹಾಗಿ ಇರುವ ಕೋಟೆಗಳು, ಮಸೀದಿಗಳು, ಗುರುದ್ವಾರ ಹಾಗೂ ಈ ಧಾರ್ಮಿಕ, ಐತಿಹಾಸಿಕ ಸ್ಮಾರಕಗಳೊಂದಿಗೆ ಇಲ್ಲಿನ ಜನರು ಹೊಂದಿರುವ ಭಾವನಾತ್ಮಕ ಸಂಬಂಧಗಳನ್ನು ವಿವರಿಸುವ ಲೇಖನ, ಪ್ರಬಂಧ, ಕಾವ್ಯ ಸ್ಪರ್ಧೆಯಲ್ಲಿ ಪ್ರಕಟವಾದ ಪ್ರಬಂಧಗಳು ಹಾಗೂ ಕವನಗಳು, ಲಲಿತ ಪ್ರಬಂಧ, ಪ್ರವಾಸ ಕಥನ ಸೇರಿದಂತೆ ಸಾಹಿತ್ಯದ ಹೂರಣವೇ ಇದೆ.
ವಿಶೇಷಾಂಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.