ADVERTISEMENT

ಕನ್ನಡದ ಅನನ್ಯತೆ, ಅಸ್ಮಿತೆ ಉಳಿಸಿ–ಬೆಳೆಸಿ: ಸುರೇಶ ಎಲ್.ಶರ್ಮಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:32 IST
Last Updated 24 ನವೆಂಬರ್ 2024, 15:32 IST
ಕಲಬುರಗಿ ನಗರದ ಅಮರ ಕಲಾ ಸ್ಟುಡಿಯೋದಲ್ಲಿ ನಡೆದ ಕವಿಗೋಷ್ಠಿ, ಜಾನಪದ ಉತ್ಸವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರಗಿ ನಗರದ ಅಮರ ಕಲಾ ಸ್ಟುಡಿಯೋದಲ್ಲಿ ನಡೆದ ಕವಿಗೋಷ್ಠಿ, ಜಾನಪದ ಉತ್ಸವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರಗಿ: ‘ಕನ್ನಡದ ಅನನ್ಯತೆ ಹಾಗೂ ಅಸ್ಮಿತೆ ಉಳಿಸಿ ಬೆಳೆಸಲು ಎಲ್ಲರೂ ಕಂಕಣ ಬದ್ಧರಾಗಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುರೇಶ ಎಲ್.ಶರ್ಮಾ ಹೇಳಿದರು.

69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಅಮರ ಕಲಾ ಸ್ಟುಡಿಯೋದಲ್ಲಿ ಪಾಳಾದ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕವಿಗೋಷ್ಠಿ, ಜಾನಪದ ಉತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಇಂಥ ಸಮಾರಂಭಗಳನ್ನು ಆಯೋಜಿಸುವ ಮೂಲಕ ಕಲಾವಿದರು ಹಾಗೂ ಸಾಹಿತಿಗಳಿಗೆ ವೇದಿಕೆ ಒದಗಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ಸ್ವಾರ್ಥಕ್ಕೆ ಒಳಗಾಗದೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಮಾಡುವುದು ಅನಿವಾರ್ಯ. ಗೀತಾ ನಾಗಭೂಷಣ, ಚೆನ್ನಣ್ಣ ವಾಲೀಕಾರ, ಮಲ್ಲಿಕಾರ್ಜುನ ಲಠ್ಠೆ , ಶಿವಶರಣಪ್ಪ ಜವಳಿ ನಂತರ ಹೊಸ ತಲೆಮಾರಿನ ಲೇಖಕರು ಹೊರಹೊಮ್ಮುವ ಅಗತ್ಯವಿದೆ’ ಎಂದು ಹೇಳಿದರು.

ಲೇಖಕ ಯಶವಂತರಾಯ ಅಷ್ಠಗಿ, ಶರಣಬಸವೇಶ್ವರ ಸಂಸ್ಥಾನದ ಡಾ. ಅಲ್ಲಮಪ್ರಭು ದೇಶಮುಖ ಮಾತನಾಡಿದರು. ವಿವಿಧ ಕವಿಗಳು ಕವನ ವಾಚನ ಮಾಡಿದರು. ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.  

ಅಮರಪ್ರಿಯ ಹಿರೇಮಠ, ಸಂಗಮೇಶ ಹಿರೇಮಠ, ವೀರಶೆಟ್ಟಿ ಗಾರಂಪಳ್ಳಿ, ಎ.ಕೆ.ರಾಮೇಶ್ವರ, ಸತೀಶ ಕುಮಾರ, ಹೊಸಮನಿ, ಅಜಯಕುಮಾರ ಹಾಜರಿದ್ದರು.

ಶರಣಬಸಪ್ಪ ವಡ್ಡನಕೇರಿ, ಲವಕುಶ ಟೇಕೂರ, ಪರಮೇಶ್ವರ ದಂಡಿನ, ಮಾಮಣ್ಣ ತಳಕೇರಿ, ಲಾಲ್ ಬಹದ್ದೂರ್ ಇಂಡೆ, ಸಲೀಂ ಮಣುರಕರ್, ವಿನೋದ ಕುಮಾರ ಶಹಾಬಾದ್, ದೌಲತರಾಯಗೌಡ ಪಾಟೀಲ, ಸಿದ್ದಣ್ಣಗೌಡ ಕಡಣಿ, ನಾಗರಾಜ ಗಾಂಧಿ ಗುಡಿ, ಶಿವಶರಣಪ್ಪ ನಾಟೀಕರ್, ಮಹಾಲಕ್ಷ್ಮಿ, ಪ್ರೇಮಾ ಭಾಗವಹಿಸಿದ್ದರು.

ಅಮರ ಹಿರೇಮಠ ಸಂಗೀತ ಬಳಗದವರು ವಚನ ಪ್ರಾರ್ಥನೆ ಹಾಡಿದರು. ಅಂಬುಜಾ ನಿರೂಪಿಸಿದರು. ಅಂಬಾರಾಯ ಕೋಣೆ ಸ್ವಾಗತಿಸಿದರು. ಬಸವಂತರಾಯ ಕೋಳಕೂರ ವಂದಿಸಿದರು.

ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ಸಿಗಬೇಕು ಎನ್ನುವ ಉದ್ದೇಶದಿಂದ ನಿರಂತರವಾಗಿ ಕನ್ನಡ ಸೇವೆ ಕೈಗೊಂಡಿದ್ದೇವೆ. ಈ ಸೇವೆಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಕೈಜೋಡಿಸಬೇಕು
ಶರಣಗೌಡ ಪಾಟೀಲ ಪಾಳಾ ಅಧ್ಯಕ್ಷ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್

ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ನಿಜಲಿಂಗಪ್ಪ ಹಾಲವಿ (ಕಲಾ ಕ್ಷೇತ್ರ) ಕೆ.ಗಿರಿಮಲ್ಲ (ಸಾಹಿತ್ಯ ಕ್ಷೇತ್ರ) ಸಿ.ಎಸ್. ಮಾಲಿಪಾಟೀಲ (ಜಾನಪದ ಕ್ಷೇತ್ರ) ಎಸ್.ಡಿ.ಪಾಟೀಲ (ಸಮಾಜ ಸೇವೆ) ನಾಗರತ್ನ ಇಂಡೆ (ಶಿಕ್ಷಣ ಕ್ಷೇತ್ರ) ವಿಜಯಕುಮಾರ ಗಡವಂತಿ (ಆಡಳಿತ ಕ್ಷೇತ್ರ) ಸುರೇಖಾ ಜೇವರ್ಗಿ (ಸಾಹಿತ್ಯ ಕ್ಷೇತ್ರ) ಕುಪೇಂದ್ರ.ಕೆ.ಟೊಣ್ಣೆ ದಿಶೃಂಗಾ (ಸಮಾಜ ಸೇವೆ) ರಾಮರಾಜ ನಗರೆ (ಕೃಷಿ ಕ್ಷೇತ್ರ) ರಾಜಶೇಖರ ಹರಿಹರ (ಜಾನಪದ ಕ್ಷೇತ್ರ) ರಮೇಶ ಮೇಳಕುಂದಾ (ಮಾಧ್ಯಮ ಕ್ಷೇತ್ರ) ಗುಂಡಪ್ಪ ಬಿ.ಅಲ್ಲೂರ (ಕೈಗಾರಿಕಾ ಕ್ಷೇತ್ರ) ಅಣ್ಣಾರಾಯ ಶೆಳ್ಳಗಿ ಮತ್ತಿಮಡು (ಸಂಗೀತ ಕ್ಷೇತ್ರ) ಜಗದೀಶ ಸುಗಂಧಿ (ಕನ್ನಡ ಸೇವೆ) ವಿಶಾಲಾಕ್ಷಿ (ಶಿಕ್ಷಣ ಕ್ಷೇತ್ರ) ಹಾಗೂ ಶಿವಕುಮಾರ ಪಾಟೀಲ (ಸಂಗೀತ ಕ್ಷೇತ್ರ) ಅವರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.