ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಬಗ್ಗಲಗುಡ್ಡದ ಗ್ರಾಮದ ಅರಣ್ಯ ಸಂರಕ್ಷಿತ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಮುಂಜೂರು ಮಾಡಿ ಪಟ್ಟಾ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸುಧಾ ಅರಮನೆ ಅವರನ್ನು ಕಂದಾಯ ಇಲಾಖೆ ಶನಿವಾರ ಅಮಾನತುಗೊಳಿಸಿದೆ. ಗ್ರೇಡ್ 1ನಿಂದ ಗ್ರೇಡ್ 2ಗೆ ಹಿಂಬಡ್ತಿಯನ್ನೂ ಮಾಡಿದೆ.
ಅಲ್ಲದೆ, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಅರುಣಕುಮಾರ ಎಂಬುವರನ್ನು ಅಮಾನತುಗೊಳಿಸಿದೆ. ಅರಣ್ಯ ಇಲಾಖೆಗೆ ಸೇರಿದ 442 ಎಕರೆ ಜಮೀನಿನಲ್ಲಿ 16 ಎಕರೆ ಭೂಮಿಯನ್ನು ಅದೇ ಗ್ರಾಮದ 8 ಜನ ವ್ಯಕ್ತಿಗಳಿಗೆ ಮಂಜೂರು ಮಾಡಿ ಪಟ್ಟಾ ಮಾಡಿಕೊಟ್ಟಿದ್ದರಿಂದ ಲಿಂಗಸುಗೂರು ಆರ್‌ಎಫ್‌ಓ ವಿದ್ಯಾಶ್ರೀ ದೊಡ್ಡಮನಿ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
‘16 ಎಕರೆ ಸಂರಕ್ಷಿತ ಅರಣ್ಯ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪಟ್ಟಾ’ ಎಂಬ ಶೀರ್ಷಿಕೆ ಅಡಿಯಲ್ಲಿ ಕಳೆದ ಜೂನ್ 25ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.