ADVERTISEMENT

ಶಹಾಬಾದ್‌ | ಟೆಲಿಕಾಂ ಕಂಪನಿ ದರ ಹೆಚ್ಚಳ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:16 IST
Last Updated 4 ಜುಲೈ 2024, 14:16 IST
ಶಹಾಬಾದ್‌ ನಗರದಲ್ಲಿ ಗ್ರೇಡ್– 2 ತಹಶೀಲ್ದಾರ್‌ ಗುರುರಾಜ ಸಂಗಾವಿ ಮನವಿ ಪತ್ರವನ್ನು ಸಲ್ಲಿಸಲಾಯಿತು
ಶಹಾಬಾದ್‌ ನಗರದಲ್ಲಿ ಗ್ರೇಡ್– 2 ತಹಶೀಲ್ದಾರ್‌ ಗುರುರಾಜ ಸಂಗಾವಿ ಮನವಿ ಪತ್ರವನ್ನು ಸಲ್ಲಿಸಲಾಯಿತು   

ಶಹಾಬಾದ್: ಟೆಲಿಕಾಂ ಕಂಪನಿಗಳು ರಿಚಾರ್ಜ್, ಇಂಟರ್‌ನೆಟ್‌ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಸಾರ್ವಜನಿಕ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಅನ್ನು ಬಲಪಡಿಸಬೇಕು ಎಂದು ಒತ್ತಾಯಿಸಿ ನಗರದ ನೆಹರು ಚೌಕ್‌ನಲ್ಲಿ ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್. ಎಚ್ ಮಾತನಾಡಿ, ಜಿಯೊ ಮತ್ತು ಇತರೆ ಖಾಸಗಿ ಟೆಲಿಕಾಂ ಕಂಪನಿಗಳು ಬಹುತೇಕ ಎಲ್ಲ ಹೊಸ ಪ್ಲಾನ್‌ ದರಗಳು ಶೇಕಡ 10 ರಿಂದ 25ರಷ್ಟು ಏರಿಕೆ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಸಾರ್ವಜನಿಕ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಬಲಪಡಿಸಿ ಮೊಬೈಲ್ ಗ್ರಾಹಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಗ್ರೇಡ್–2 ತಹಶೀಲ್ದಾರ್‌ ಗುರುರಾಜ ಸಂಗಾವಿ ಅವರಿಗೆ ಕೇಂದ್ರದ ದೂರ ಸಂಪರ್ಕ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಟ್ರಾಯ್ ಮುಖ್ಯಸ್ಥರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ರಮೇಶ ದೇವಕರ, ನೀಲಕಂಠ ಹುಲಿ, ಆಮ್ ಆದ್ಮಿ ಪಕ್ಷದ ಶೇಖ್ ಮಲಂಗ, ನಾಗರಾಜ ಮಾನೆ, ತೇಜಸ್ ಆರ್ ಇಬ್ರಾಹಿಂಪುರ, ದೇವರಾಜ್ ಮಿರಲ್ಕರ, ರಾಕೇಶ್ ಪೋತನ್ಕರ, ಮಲ್ಲು ದೊರೆ, ಇರ್ಫಾನ್ ಶೇಕ್, ಅಬ್ದುಲ್ ರೆಹಮಾನ್, ಸಲೀಂ, ಶಿವಶರಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.