ಹಲಕರ್ಟಿ (ವಾಡಿ): ಗ್ರಾಮದ ವಿಜಯಕುಮಾರ ರಾವೂರಕರ ಅವರ ಮಗ ಪ್ರಜ್ವಲ (15) ಎಂಬ ಬಾಲಕನಿಗೆ ಹಾವೊಂದು ಎರಡು ತಿಂಗಳಲ್ಲಿ 9 ಬಾರಿ ಕಚ್ಚಿದೆ ಎಂದು ಬಾಲಕ ಹಾಗೂ ಬಾಲಕನ ತಂದೆ ಹೇಳುತ್ತಿದ್ದಾರೆ.
ಬೆನ್ನುಬಿಡದ ಹಾವಿನ ಅವಾಂತರದಿಂದ ಬಳಲುತ್ತಿದ್ದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆರಳಿಗೆ ಹಾವು ಕಚ್ಚಿದ ಗಾಯಗಳಾಗಿವೆ.
ಹಲಕರ್ಟಿಯ ಮನೆಯಲ್ಲಿ ಜು.4ರಂದು ಮೊದಲ ಸಲ ಹಾವು ಕಚ್ಚಿದೆ. ತಕ್ಷಣ ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಮನೆಗೆ ಬಂದ ತಕ್ಷಣ ಜು.7ರಂದು ಮತ್ತೆ ಕಚ್ಚಿದೆ. ನಂತರ ಬಳಿರಾಮ್ ಚೌಕ್ ನಲ್ಲಿನ ಹೆಂಡತಿ ತವರು ಮನೆಗೆ ಕಳಿಸಿದೆ. ಅಲ್ಲಿ ಸಹ ಹಾವು 3 ಸಲ ಕಚ್ಚಿದೆ. ನಂತರ ಕೆಲಸಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದಾಗ ಅಲ್ಲಿ ಎರಡು ಸಲ ಕಚ್ಚಿದೆ. ಹೀಗೆ 2 ತಿಂಗಳಲ್ಲಿ 9 ಸಲ ಕೈಕಾಲಿಗೆ ಕಚ್ಚಿದೆ. ಮೊದಲು ನಾನು ನಂಬಿರಲಿಲ್ಲ. ಆದರೆ ಹಾವು ಕಚ್ಚಿದ ಗಾಯದ ಗುರುತುಗಳು ಹಾಗೂ ದೇಹದಲ್ಲಿ ಹಾವಿನ ವಿಷ ಸೇರಿಕೊಂಡಿರುವ ಕುರಿತು ಚಿಕಿತ್ಸೆ ನೀಡುವಾಗ ವೈದ್ಯರು ಹೇಳಿದ ಅಂಶಗಳು ಅಚ್ಚರಿ ಮೂಡಿಸುತ್ತಿವೆ ಎಂದು ಬಾಲಕನ ತಂದೆ ವಿಜಯಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.