ADVERTISEMENT

ಬಸವಧರ್ಮ ದಮನಕ್ಕೆ ಹಲವು ಬಾರಿ ಯತ್ನ: ಸಾಹಿತಿ ಆರ್.ಕೆ. ಹುಡಗಿ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:55 IST
Last Updated 19 ಅಕ್ಟೋಬರ್ 2024, 0:55 IST
ಆರ್.ಕೆ. ಹುಡಗಿ
ಆರ್.ಕೆ. ಹುಡಗಿ   

ಬಸವಕಲ್ಯಾಣ : ‘ದುಡಿಯುವ ವರ್ಗದವರಿಂದ ಸೃಷ್ಟಿಯಾದ ವೈಚಾರಿಕ ನೆಲೆಯ ಬಸವಧರ್ಮವು ಜಗತ್ತು ಆಳಬಲ್ಲದು ಎಂಬ ಭಯದಿಂದ ಇತ್ತೀಚಿನವರೆಗೆ ಹಲವಾರು ಸಲ ಇದರ ದಮನಕ್ಕೆ ಯತ್ನಿಸಲಾಗಿದೆ’ ಎಂದು ಸಾಹಿತಿ ಆರ್.ಕೆ. ಹುಡಗಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೂರು ದಿನಗಳ 23ನೇ ಕಲ್ಯಾಣ ಪರ್ವದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಅಂತರ್ಜಾತಿಯ ವಿವಾಹದ ಕಾರಣ ಕಲ್ಯಾಣ ಕ್ರಾಂತಿ ಘಟಿಸಿರುವುದು ಸುಳ್ಳು. ಮದುವೆಯಾದ ಇಬ್ಬರೂ ಶರಣರು ಲಿಂಗಾಯತರೇ ಆಗಿದ್ದರಿಂದ ಅಂತರ್ಜಾತಿಯ ಮದುವೆ ಹೇಗಾಗುತ್ತದೆ? ಇದಲ್ಲದೆ ಅವರ ವೈಯಕ್ತಿಕ ಕಾರಣಕ್ಕಾಗಿ ವಚನಗಳನ್ನು ಏಕೆ ಸುಡಲಾಯಿತು. ಶರಣರ ವಧೆ ಏಕೆ ನಡೆಯಿತು. ಶರಣತತ್ವ ಇಲ್ಲವಾಗಿಸುವುದೇ ವಿರೋಧಿಗಳ ಹುನ್ನಾರವಾಗಿತ್ತು. ಈಗಲೂ ರಾಜ್ಯ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆಗೆ ಯತ್ನಿಸಿದ್ದರಿಂದ ಕೇಂದ್ರ ಅದನ್ನು ನಿರಾಕರಿಸಿತು’ ಎಂದರು.

ADVERTISEMENT

‘ಈಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಮತ್ತೆ ವಚನ ದರ್ಶನ ಗ್ರಂಥ ರಚಿಸಿ ಇಲ್ಲಸಲ್ಲದನ್ನು ಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಧರ್ಮ ಉಳಿಸಿದಕ್ಕಾಗಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಎಂ.ಎಂ.ಕಲಬುರ್ಗಿ ಅವರ ನೆನಪು ಅಜರಾಮರ ಆಗಿರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.