ಕಾಳಗಿ: ಬಂಜಾರ ಸಮಾಜವು ಕಲೆ, ಸಂಸ್ಕೃತಿಯನ್ನು ಹೊಂದಿದ್ದು, ಅದರ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.
ಕಾಳಗಿ ತಾಲ್ಲೂಕಿನ ಬೇಡಸೂರ ಎಂ.ತಾಂಡಾದಲ್ಲಿ ಏರ್ಪಡಿಸಿದ್ದ ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯದ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ದೇಶದಾದ್ಯಂತ ಸಮುದಾಯದ ಜನರು ಇದ್ದಾರೆ ಎಂದರು.
ಹಬ್ಬದ ನಿಮಿತ್ತ ತಾಂಡಾದ ಯುವತಿಯರು ರಂಗು-ರಂಗಿನ ಹೊಸಬಟ್ಟೆಗಳನ್ನು ಧರಿಸಿ ಮನೆಯಿಂದ ಜ್ಯೋತಿ ಹೊತ್ತಿಸಿಕೊಂಡು ಸೇವಾಲಾಲ್ ಮರಿಯಮ್ಮ ದೇವಾಲಯಕ್ಕೆ ಬಂದು ದೇವರಿಗೆ ದೀಪ ಬೆಳಗಿದರು.
ನಂತರ ತಾಂಡಾದ ಎಲ್ಲ ಮನೆಗಳಿಗೆ ತೆರಳಿ ದೀಪ ಬೆಳಗಿ ಕಾಣಿಕೆ ಸ್ವಿಕರಿಸಿದರು. ಈ ಪ್ರಕ್ರಿಯೆ ಬೆಳಗಿನ ಜಾವದವರೆಗೂ ನಡೆಯಿತು.
ಬೇಡಸೂರ ಎಂ. ತಾಂಡಾ, ಕೊಡದೂರ ತಾಂಡಾ, ಕಾಳಗಿ ಕರಿಕಲ್ ತಾಂಡಾ, ರುಮ್ಮನಗೂಡ ತಾಂಡಾ, ಸುಗೂರ (ಕೆ) ಹಾಗೂ ಕಾಳಗಿ ತಾಲ್ಲೂಕಿನ ತಾಂಡಾದಲ್ಲಿ ಜನರು ಸಂಭ್ರಮದಿಂದ ಹಬ್ಬ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.