ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯಿಂದ ನೀರು ಸರಬರಾಜಾಗುವ ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಫರಹತಾಬಾದ್ ಹಾಗೂ ಸೀತನೂರ ಹತ್ತಿರದಲ್ಲಿ ತುರ್ತು ದುರಸ್ತಿ ಕಾರ್ಯ ಪ್ರಯುಕ್ತ ಕೊಟನೂರ ಹಾಗೂ ಶೋರಗುಂಬಜ್ ನೀರು ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಸೆಪ್ಟೆಂಬರ್ 8 ಹಾಗೂ 9ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಐಡಿಎಫ್‌ಸಿ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ನಗರದ ಬಿದ್ದಾಪುರ, ರಾಯರಗುಡ್ಡಿ, ವಿಶಾಲನಗರ, ಅಂಬಿಕಾ ನಗರ, ಪಿ ಅಂಡ್ ಟಿ ಕಾಲೊನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ್‌ನಗರ, ಬನಶಂಕರಿ ನಗರ, ಹರಿನಗರ, ಗಾಭರೆ ಲೇಔಟ್, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್‌ಜಿಒ ಕಾಲೊನಿ, ಜೇವರ್ಗಿ ಕಾಲೊನಿ, ಮಾಕಾ ಲೇಔಟ್, ಸಂತೋಷ ಕಾಲೊನಿ, ಬ್ಯಾಂಕ್ ಕಾಲೊನಿ, ಬಾಲಾಜಿ ನಗರ, ರಹೆಮತ್ ನಗರ, ಸಂಪಿಗೆ ನಗರ, ಬುದ್ಧನಗರ, ರೇವಣಸಿದ್ದೇಶ್ವರ ಕಾಲೊನಿ, ಸಾಯಿ ನಗರ, ಒಝಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೊನಿ, ಸಿಐಬಿ ಕಾಲೊನಿ, ಶಕ್ತಿ ನಗರ, ಸ್ಟೇಷನ್ ಬಜಾರ, ಐವಾನ್ ಶಾಹಿ, ಶಾಂತಿ ನಗರ, ವಿಠ್ಠಲನಗರ, ಖೂಬಾ ಪ್ಲಾಟ್, ಮಿಸಬಾ ನಗರ, ಅಜ್ಮೆರ್ ಕಾಲೊನಿ, ಕರಿಮ ನಗರ, ಗಾಲಿಫ್ ಕಾಲೊನಿ, ಮಹಮ್ಮದ ಚೌಕ್, ಖಾದಿಲ್ ಚೌಕ್, ಶಿವನಗರ, ಸಿದ್ಧರಾಮೇಶ್ವರ ಕಾಲೊನಿ, ನಬಿ ಕಾಲೊನಿ, ಶೇಖ ರೋಜಾ, ಕೈಲಾಸ ನಗರ, ಜಿ.ಆರ್. ನಗರ, ಕಸ್ತೂರಿ ನಗರ, ಆಶ್ರಯ ಕಾಲೊನಿ, ಪೂಜಾ ಕಾಲೊನಿ, ಜಾಗೃತಿ ಕಾಲೊನಿ, ಓಂ ನಗರ, ಜುಬೈರ್ ಕಾಲೊನಿ, ಅಜಾದಪುರ ಕಾಲೊನಿ, ನಾಯ್ಡು ಕಾಲೊನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.