ಆಳಂದ: ತಾಲ್ಲೂಕಿನ ಧುತ್ತರಗಾಂವ ವೀರೇಶ್ವರ ದೇವರ ಜಾತ್ರೆ ಗುರುವಾರ ಸಂಭ್ರಮದಿಂದ ಜರುಗಿತು. ಜಾತ್ರೆ ಪ್ರಯುಕ್ತ ಗ್ರಾಮದಲ್ಲ ಪಲ್ಲಕ್ಕಿ ಉತ್ಸವು ನಡೆಯಿತು.
ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರಂತರ ಕುಣಿತ, ಡೊಳ್ಳು ಕುಣಿತ, ವಾದ್ಯ ಮೇಳ ಸದ್ದು ಜನರ ಕಣ್ಮನ ಸೆಳೆಯಿತು. ಮನೆ ಮುಂದೆ ಬಂದ ಪಲ್ಲಕ್ಕಿಗೆ ತೆಂಗಿನಕಾಯಿ, ಕರ್ಪೂರದೊಂದಿಗೆ ಪೂಜೆ ಸಲ್ಲಿಸಿದ ಭಕ್ತರು ದರ್ಶನ ಪಡೆದು ಪುನೀತರಾದರು.
ಗ್ರಾಮದ ಹೊರವಲಯದಲ್ಲಿ ನಡೆದ ಪೈಲ್ವಾನರ ಕುಸ್ತಿ ಸ್ಪರ್ಧೆಯಲ್ಲಿ ಸುತ್ತಲಿನ ಗ್ರಾಮಗಳ ಕುಸ್ತಿಪಟುಗಳಷ್ಟೇ ಅಲ್ಲದೆ ಅಕ್ಕಲಕೋಟದ ಕುಸ್ತಿ ಪಟುಗಳು ಸೆಣಸಾಡಿ ತಮ್ಮ ಸಾಹಸಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.