ADVERTISEMENT

ಪರಿಷತ್ ಚುನಾವಣೆ: ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:00 IST
Last Updated 30 ಮೇ 2024, 7:00 IST
ಚಿಂಚೋಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಡಾ.ಅವಿನಾಶ ಜಾಧವ ಬುಧವಾರ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚಿಸಿದರು
ಚಿಂಚೋಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಡಾ.ಅವಿನಾಶ ಜಾಧವ ಬುಧವಾರ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಮತಯಾಚಿಸಿದರು    

ಚಿಂಚೋಳಿ: ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರವಾಗಿ ಬುಧವಾರ ಪಟ್ಟಣದ ವಿವಿಧ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಶಾಸಕ ಡಾ.ಅವಿನಾಶ ಜಾಧವ ಮತಯಾಚಿಸಿದರು.

ಪಟ್ಟಣದ ನ್ಯಾಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಿ.ಬಿ.ಪಾಟೀಲ ಪದವಿ ಮಹಾವಿದ್ಯಾಲಯಗಳಿಗೆ ತೆರಳಿ ಅಮರನಾಥ ಪಾಟೀಲರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕರೊಂದಿಗೆ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ನಿಕಟಪೂರ್ವ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ಭೀಮಶೆಟ್ಟಿ ಮುರುಡಾ, ಗೋಪಾಲರಾವ್ ಕಟ್ಟಿಮನಿ, ಗೌತಮ ಪಾಟೀಲ, ಶಿವಶರಣಪ್ಪ ಜಾಪಟ್ಟಿ, ಮಾಣಿಕರಾವ್ ಗುಲಗುಂಜಿ, ಜಗನ್ನಾಥ ಅಗ್ನಿಹೋತ್ರಿ, ಜಗನ್ನಾಥ ಗಂಜಗಿರಿ, ವಿಶ್ವನಾಥ ಬೆನಕಿನ್ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಕೆ.ಎಂ.ಬಾರಿ, ಲೋಕೇಶ ಶೆಳ್ಳಗಿ, ಹಣಮಂತ ಭೋವಿ, ಆಕಾಶ ಕೊಳ್ಳೂರು, ಗೋವಿಂದ ರಾಠೋಡ್, ಅಭಿಷೇಕ ಮಲಕಾನೋರ್, ರಾಜಕುಮಾರ ಪವಾರ, ಜನಾರ್ದನ ಯಂಪಳ್ಳಿ, ಶಂಕರ ರಾಠೋಡ್ ಮೊದಲಾದವರು ಹಾಜರಿದ್ದರು.

ADVERTISEMENT

ಸುಭಾಷ್ ರಾಠೋಡ್ ಮತಯಾಚನೆ:  ಪಟ್ಟಣದ ವಿವಿಧೆಡೆ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಪರ ಮತಯಾಚಿಸಿದರು. ನ್ಯಾಯಾಲಯ, ಪದ್ಮಾ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿ.ಬಿ ಪಾಟೀಲ ಕಾಲೇಜು, ಸರ್ಕಾರಿ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ಚಂದ್ರಶೇಖರ ಪಾಟೀಲರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.

ಅವರೊಂದಿಗೆ ಅಬ್ದುಲ್ ಬಾಷೀತ್, ಲಕ್ಷ್ಮಣ ಅವುಂಟಿ, ಜಗನ್ನಾಥ ಗುತ್ತೇದಾರ, ರಾಮಶೆಟ್ಟಿ ಪವಾರ್, ಅಜೀತ ಪಾಟೀಲ, ಶ್ರೀನಿವಾಸ ಬಂಡಿ, ನಾಗೇಶ ಗುಣಾಜಿ,
ಡಾ.ತುಕಾರಾಮ ಪವಾರ, ಬಸವರಾಜ ಕಡಬೂರ, ಖಲೀಲ ಪಟೇಲ್, ಶಬ್ಬೀರ್ ಅಹಮದ್, ಶಿವರಾಜ ಪಾಟೀಲ, ಸುಭಾಷ್ಚಂದ್ರ ಪಾಟೀಲ, ಆರ್. ಗಣಪತರಾವ್, ಹೀರಾಸಿಂಗ್ ಜಾಧವ, ರಾಜಕುಮಾರ ನವುಲೆ, ಉಮೇಶ ಪಾಟೀಲ, ಅಂಕಿತಾ ಕಮಲಾಕರ ಗೋಪಾಲ ಕೊರಡಂಪಳ್ಳಿ ಮೊದಲಾದವರು ಹಾಜರಿದ್ದರು.

ಚಿಂಚೋಳಿಯ ಸಿ.ಬಿ.ಪಾಟೀಲ ಕಾಲೇಜಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಬುಧವಾರ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಪರ ಮತಯಾಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.