ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆ ಈಡೇರುವ ಕಾಲ ಕೂಡಿ ಬಂದಿದೆ. ಅದೂ, ಜಯದೇವ ಆಸ್ಪತ್ರೆಯ ಮೂಲಕ. 2016ರಲ್ಲಿ ಇಲ್ಲಿ ಈ ಆಸ್ಪತ್ರೆ ಆರಂಭವಾಗಿದ್ದರೂ ಇದು ಇದ್ದದ್ದು ಬಾಡಿಗೆ ಕಟ್ಟಡದಲ್ಲಿ. ಇನ್ನು ಕೆಲವೇ ದಿನಗಳಲ್ಲಿ, ಡಾ.ಎಸ್.ಎಂ. ಪಂಡಿತ ರಂಗಮಂದಿರದ ಮುಂಭಾಗದ ಸುಸಜ್ಜಿತ ಬೃಹತ್ ಕಟ್ಟಡದಲ್ಲಿ ಈ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಹೃದಯ ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿಗೆ ಹೋಗುತ್ತಿದ್ದ ಈ ಭಾಗದ ಜನರಿಗೆ ಈಗ ಕಲಬುರಗಿಯಲ್ಲಿಯೇ ಈ ಸೌಲಭ್ಯ ದೊರಕಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.