ADVERTISEMENT

ಅಫಜಲಪುರ | ಭೀಮಾ ನದಿಗೆ ನೀರು, ನಿಟ್ಟುಸಿರು ಬಿಟ್ಟ ಜನರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:34 IST
Last Updated 18 ಜೂನ್ 2024, 15:34 IST
ಅಫಜಲಪುರ ತಾಲ್ಲೂಕಿನ ಸೊನ್ನದ ಭೀಮಾ ಜಲಾಶಯ ಮಳೆ ನೀರಿನಿಂದ ಭರ್ತಿಯಾಗುತ್ತಿರುವುದು
ಅಫಜಲಪುರ ತಾಲ್ಲೂಕಿನ ಸೊನ್ನದ ಭೀಮಾ ಜಲಾಶಯ ಮಳೆ ನೀರಿನಿಂದ ಭರ್ತಿಯಾಗುತ್ತಿರುವುದು   

ಅಫಜಲಪುರ: ಕಳೆದ 15 ದಿನಗಳಿಂದ ಬೀಮಾ ನದಿ ಪಾತ್ರದಲ್ಲಿ ನಿರಂತರ ಮಳೆಯಾಗದ ಪರಿಣಾಮ ನದಿಗೆ ನೀರು ಬಂದಿದ್ದು ಪಟ್ಟಣಕ್ಕೆ ನೀರು ಪೂರೈಕೆಯ ಸಮಸ್ಯೆ ಸಮಸ್ಯೆ ಬಹುತೇಕ ಬಗೆಹರಿದಂತಾಗಿದೆ. ಜಲಾಶಯದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಿದೆ.

‘ಭೀಮಾ ಜಲಾಶಯದಲ್ಲಿ ಸದ್ಯ 2.586 ಟಿಎಂಸಿ ಅಡಿ ಮಳೆ ನೀರು ಸಂಗ್ರಹವಾಗಿದೆ ಮತ್ತು 2,660 ಒಳಹರಿವು ಇದೆ. ಈವರೆಗೂ ಮಹಾರಾಷ್ಟ್ರದ ಯಾವ ಜಲಾಶಯದಿಂದಲೂ ಭೀಮಾ ನದಿಗೆ ನೀರು ಬಿಟ್ಟಿಲ್ಲ. ಪುರಸಭೆಯವರ ಬೇಡಿಕೆ ತಕ್ಕಂತೆ ಭೀಮಾ ನದಿಯ ಕೆಳಗಿನ ಭಾಗದವರಿಗೆ ಕುಡಿಯಲು ನೀರು ಬಿಡಲಾಗುತ್ತಿದೆ ಸದ್ಯಕ್ಕೆ ಕುಡಿಯಲು ಮಾತ್ರ ನೀರು ಬಳಕೆ ಮಾಡಲಾಗುತ್ತಿದೆ’ ಭೀಮಾ ನದಿ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ ಮಾಹಿತಿ ನೀಡಿದರು.

ದೇವಲ ಗಾಣಗಾಪುರದ ಸಂಗಮ ಕ್ಷೇತ್ರದ ವ್ಯವಸ್ಥಾಪಕ ಮಡಿವಾಳಪ್ಪ ವಡಗೇರಿ ಮಾಹಿತಿ ನೀಡಿ, ‘ಕಳೆದ ಮೂರು ನಾಲ್ಕು ತಿಂಗಳಿಂದ ಸಂಗಮದಲ್ಲಿ ನೀರು ಇರಲಿಲ್ಲ ಯಾತ್ರಿಕರಿಗೆ ತೊಂದರೆ ಆಗುತ್ತಿತ್ತು ಸದ್ಯಕ್ಕೆ ಸಂಗಮದಲ್ಲಿ ನೀರು ಬಂದಿದೆ ಯಾಂತ್ರಿಕರಿಗೆ ಅನುಕೂಲವಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.