ADVERTISEMENT

ಬೆಳೆ ಹಾನಿ ಪರಿಹಾರ: ರೈತರಿಗೆ ಶಾಸಕ ಅಜಯ ಸಿಂಗ್ ಭರವಸೆ, ಧರಣಿ ವಾಪಸ್

ಯಡ್ರಾಮಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 9:09 IST
Last Updated 26 ಡಿಸೆಂಬರ್ 2021, 9:09 IST
ಶಾಸಕ ಡಾ.ಅಜಯ ಸಿಂಗ್ ರೈತರಿಗೆ ಭರವಸೆ ನೀಡಿದರು
ಶಾಸಕ ಡಾ.ಅಜಯ ಸಿಂಗ್ ರೈತರಿಗೆ ಭರವಸೆ ನೀಡಿದರು   

ಯಡ್ರಾಮಿ (ಕಲಬುರಗಿ ಜಿಲ್ಲೆ): 'ರೈತರ ಬೆಳೆ ಹಾನಿಯಾಗಿರುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿರುವೆ. ಪರಿಹಾರ ಸಿಗದಿದ್ದರೆ ನಾನೂ ಸಹ ನಿಮ್ಮೊಂದಿಗೆ ಪ್ರತಿಭಟಿಸುವೆ. ಮುಖ್ಯಮಂತ್ರಿ ಬಳಿ ನಿಮ್ಮೆಲ್ಲರನ್ನು ಕರೆದೊಯ್ದು ಮಾತನಾಡಿಸುವೆ. ಈಗ ಧರಣಿ ಕೈಬಿಡಿ' ಎಂದು ಶಾಸಕ ಡಾ.ಅಜಯ ಸಿಂಗ್ ಭರವಸೆ ನೀಡಿದರು.

ಬೆಳ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟಣದ ತಹಶಿಲ್ದಾರ್ ಕಚೇರಿ ಆವರಣದಲ್ಲಿ ಐದು ದಿನಗಳಿಂದ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ, ಧರಣಿನಿರತರ ಮನವೊಲಿಸಲು ಪ್ರಯತ್ನಿಸಿದರು.

'ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಈ ಸಮಸ್ಯೆಯಾಗಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಲಾಗಿನ್ ಓಪನ್ ಮಾಡಿಸಿ ರೈತರ ಬೆಳೆ ಹಾನಿ ದಾಖಲಿಸಿ ಪರಿಹಾರ ಕೊಡಿಸುತ್ತೇವೆ' ಎಂದರು.

ADVERTISEMENT

ಶಾಸಕರಿಂದ ಭರವಸೆ ದೊರೆತ ನಂತರ ಧರಣಿನಿರತರು ಧರಣಿ ಕೈಬಿಟ್ಟರು.

ಪ್ರಮುಖರಾದ ಈರಣ್ಣ ಭಜಂತ್ರಿ, ವಿಶ್ವನಾಥ ಜಿ ಪಾಟೀಲ, ಅಮರನಾಥ ಸಾಹು, ಲಾಳೆಸಾಬ ಮನಿಯಾರ, ಶೇಫಿಉಲ್ಲಾ ದಖನಿ, ಅಫ್ರೋಜ್ ಅತ್ನೂರ, ಬಸವರಾಜ ಕಲಕೇರಿ, ಮಾಳು ಕಾರಗುಂಡರ, ಈರಣ್ಣಗೌಡ ಪಾಟೀಲ, ಚಂದ್ರು ಮಲ್ಲಬಾದ್, ಚಂದ್ರಶೇಖರ ಪುರಾಣಿಕ, ಹಯ್ಯಾಳಪ್ಪ ಗಂಗಾಕರ, ಶೇಖನದೀಮ್ ಮಳ್ಳಿಕರ್, ಮಲ್ಲು ಹಂಗರಗಿ, ರಾಜು ಗಂಗಾಕರ, ದೇವಾನಂದ ಗುತ್ತೇದಾರ, ಕಾಂಗ್ರೆಸ್ ಮುಖಂಡರು ಮತ್ತು ವಿವಿಧ ಗ್ರಾಮದ ರೈತರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.