ADVERTISEMENT

ಕಾಳಗಿ: ಬಣಬಿ ಎಲ್ಲಮ್ಮದೇವಿ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:30 IST
Last Updated 26 ಮಾರ್ಚ್ 2024, 15:30 IST
ಕಾಳಗಿ ತಾಲ್ಲೂಕಿನ ಬಣಬಿ ಗ್ರಾಮದಲ್ಲಿ ಮಂಗಳವಾರ ಎಲ್ಲಮ್ಮದೇವಿ ಪಲ್ಲಕ್ಕಿ ಮೆರವಣಿಗೆ ಜರುಗಿತು
ಕಾಳಗಿ ತಾಲ್ಲೂಕಿನ ಬಣಬಿ ಗ್ರಾಮದಲ್ಲಿ ಮಂಗಳವಾರ ಎಲ್ಲಮ್ಮದೇವಿ ಪಲ್ಲಕ್ಕಿ ಮೆರವಣಿಗೆ ಜರುಗಿತು   

ಕಾಳಗಿ: ತಾಲ್ಲೂಕಿನ ಬಣಬಿ ಗ್ರಾಮದ ಎಲ್ಲಮ್ಮದೇವಿ ಜಾತ್ರೆ ಮಂಗಳವಾರ ಮುಕ್ತಾಯಗೊಂಡಿತು.

ಗುರುವಾರ ಗ್ರಾಮದಿಂದ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವದ ಮೂಲಕ ದೇವಿಮೂರ್ತಿಯನ್ನು ತರಲಾಯಿತು. ಮಂಗಳವಾರ ವಾದ್ಯ–ಮೇಳ, ಕುಂಭ–ಕಳಸ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನದಿಂದ ಮಹಾದೇವಪ್ಪ ಪೂಜಾರಿ ಮನೆಗೆ ಮುಟ್ಟಿಸಲಾಯಿತು.

ಶನಿವಾರದಿಂದ ಸೋಮವಾರದವರೆಗೆ ಸುತ್ತಲಿನ ಗ್ರಾಮಗಳ ಭಕ್ತರು ಭಜ್ಜಿ, ಕಡಬು, ಪಲ್ಲೆ, ಹೋಳಿಗೆ, ಚಟ್ನಿ, ಅನ್ನ ನೈವೇದ್ಯ ಸಲ್ಲಿಸಿ, ಕಾಯಿಕರ್ಪೂರ ಅರ್ಪಿಸಿ ಸಾಮೂಹಿಕ ಪ್ರಸಾದ ಸ್ವೀಕರಿಸಿದರು.

ADVERTISEMENT

ಸೋಮವಾರ ಪೈಲ್ವಾನರ ಜಂಗಿ ಕುಸ್ತಿಗಳು ನಡೆದವು. ಸಂಗೀತ ಕಲಾವಿದರಿಂದ ರಾತ್ರಿ ಭಜನೆ ಜರುಗಿತು. ಖಾಜಾ ಕೋಟನೂರ ಮಠ ಮತ್ತು ವಿವಿಧ ಭಕ್ತರು ಅನ್ನದಾಸೋಹದ ವ್ಯವಸ್ಥೆ ಮಾಡಿದರು.

ಸಿದ್ರಾಮಪ್ಪ ಚಂದನಕೇರಿ, ರಾಜು ಮಿಣಜಗಿ, ಈರಣ್ಣಾ ಪೂಜಾರಿ, ಆನಂದ ಮಾಲಿಪಾಟೀಲ, ರೇವಣಸಿದ್ದಪ್ಪ ಕನ್ನಡಗಿ, ಕಾಶಿರಾಯ ಒಡೆಯರ, ನೀಲೇಶ ತೀರ್ಥ, ಸಿದ್ದು ಪೊಲೀಸ್ ಪಾಟೀಲ, ಕಾಳಪ್ಪ ತೀರ್ಥ, ಸಿದ್ದು ಮಾಲಿಪಾಟೀಲ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.