ಕಲಬುರ್ಗಿ: ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೆಗಾ ಯೋಗ ಶಿಬಿರವನ್ನು ಆಯೋಜಿಸಲಾಯಿತು.
ಈ ಸಂಧರ್ಭದಲ್ಲಿ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ಯೋಗಾಭ್ಯಾಸಗಳ ಬಗ್ಗೆ ಪರಿಚಯಿಸಲಾಯಿತು. ದೇಹದ ಸ್ಥಿರತೆ ಹಾಗೂ ಸಮತೋಲನದ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ಸುಮಾರು 80 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉತ್ಸಾಹದಿಂದ ವಿವಿಧ ಯೋಗಾಸನಗಳನ್ನು ಮಾಡಿದರು. ಯೋಗ ಶಿಕ್ಷಕರಾದ ಗೌರಿ ಓಂಪ್ರಕಾಶ ಕರಂಜಿ, ಪತಂಜಲಿ ಯೋಗ ಪೀಠದ ಕಾವೇರಿ ಪಾಟೀಲ ಮಾಶಾಲಕರ್ ಅವರು ಮಹಾವಿದ್ಯಾಲಯದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಯೋಗ ರೂಢಿ, ಜೀವನಶೈಲಿ ಸುಧಾರಣೆ ಕುರಿತು ತರಬೇತಿ ನೀಡಿದರು.
ಸಂಚಾಲಕ ಡಾ.ಅನೀಲಕುಮಾರ ಪಟ್ಟಣ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೈಲಾಶ ಪಾಟೀಲ, ಪ್ರಾಂಶುಪಾಲ ಡಾ.ಅರವಿಂದ ಮೋಲ್ಡಿ, ಉಪ ಪ್ರಾಂಶುಪಾಲ ಡಾ.ಸತೀಶ ಪಾಟೀಲ, ಡಾ.ಸುರಭಿ ರಾಯರಾಮ್ ಪಾಲ್ಗೊಂಡಿದ್ದರು.
ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ, ಯೋಗಕ್ಷೇಮ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಸನಗಳನ್ನೂ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.