ADVERTISEMENT

ನನಗೆ ಹಾರ– ತುರಾಯಿಗಳು ಬೇಡ, ಕನ್ನಡ ಪುಸ್ತಕ ಕೊಡಿ: ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:33 IST
Last Updated 6 ಆಗಸ್ಟ್ 2021, 14:33 IST
ವಿ. ಸುನಿಲ್‌ ಕುಮಾರ್‌
ವಿ. ಸುನಿಲ್‌ ಕುಮಾರ್‌   

ಬೆಂಗಳೂರು: ‘ನನ್ನನ್ನು ಅಭಿನಂದಿಸಲು ಬರುವವರು ಹಾರ– ತುರಾಯಿಗಳನ್ನು ತರುವುದು ಬೇಡ, ಏನಾದರೂ ಕೊಡಲೇಬೇಕು ಎಂದಿದ್ದರೆ, ಒಂದು ಕನ್ನಡ ಪುಸ್ತಕವನ್ನು ಖರೀದಿಸಿ ತಂದು ಕೊಡಿ’ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

‘ನೀವು ಕೊಟ್ಟ ಪುಸ್ತಕವನ್ನು ಕಾರ್ಕಳದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ. ಇದರಿಂದ ನನ್ನ ಮತ ಕ್ಷೇತ್ರದ ಜ್ಞಾನ ದಾಹಿಗಳಿಗೆ ಪ್ರಯೋಜನ ಆಗುತ್ತದೆ’ ಎಂದು ಹೇಳಿದ್ದಾರೆ.

ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳನ್ನು ನೀಡಬಾರದು. ಅದರ ಬದಲಿಗೆ ಒಂದು ಕೆ.ಜಿ ‘ಕಾರ್ಲ ಕಜೆ’ ಎಂಬ ಸ್ಥಳೀಯ ತಳಿಯ ಕೆಂಪು ಅಕ್ಕಿಯನ್ನು ನೀಡುವಂತೆ ಸಲಹೆ ನೀಡಿ, ಅಕ್ಕಿಯನ್ನು ಕೊಡುಗೆಯಾಗಿ ನೀಡುವ ಪರಿಪಾಠ ಆರಂಭಿಸಿದರು. ಅಲ್ಲದೆ, ಈ ಬಾರಿ ಮುಂಗಾರು ಆರಂಭದಲ್ಲಿ ಕಾರ್ಕಳ ಮೂಲದ ಬಿಳಿ ಬೆಂಡೆ ಬೀಜವನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಿ ಅದನ್ನು ಎಲ್ಲರೂ ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದರು.

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನ ಸಚಿವರೂ ಆಗಿರುವ ಸುನಿಲ್, ಎರಡು ವರ್ಷಗಳ ಕಾಲ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.