ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ಇಲ್ಲಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಹಾಕಿ ಉತ್ಸವದಲ್ಲಿ ಬುಧವಾರದ ಪಂದ್ಯದಲ್ಲಿ ಕಂಗಂಡ ತಂಡ ಭರ್ಜರಿ ಜಯ ಗಳಿಸಿದೆ.
ದಿನದ ನಾಲ್ಕನೇ ಪಂದ್ಯದಲ್ಲಿ ಅಜ್ಜಿಕುಟ್ಟೀರ ತಂಡವನ್ನು ಕಂಗಂಡ ತಂಡವು 5-0 ಗೋಲುಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿತು. ಕಂಗಂಡ ತಂಡದ ಆಟಗಾರರಾದ ಕವನ್ ಕಾಳಪ್ಪ, ಪುನೀತ್ ಮುತ್ತಪ್ಪ, ಮಿಥುನ್ ಮುದ್ದಯ್ಯ ಹಾಗೂ ರಂಜನ್ ಅಪ್ಪಚ್ಚು ಗೋಲು ಗಳಿಸಿದರು. ಪುನೀತ್ ಮುತ್ತಪ್ಪ ಎರಡು ಗೋಲು ಗಳಿಸಿದರು.
ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಲೆಯಡ ತಂಡದ ವಿರುದ್ಧ ಕಲ್ಮಾಡಂಡ ತಂಡವು 4-1 ಅಂತರದ ಗೆಲುವು ಸಾಧಿಸಿತು. ಕಲ್ಮಾಡಂಡ ತಂಡದ ಆಟಗಾರರಾದ ತರುಣ್ ತಿಮ್ಮಯ್ಯ, ಚಮನ್, ಸೊಮಣ್ಣ ಹಾಗೂ ಕವನ್ ತಲಾ ಒಂದೊಂದು ಗೋಲ್ ಗಳಿಸಿದರು.
ದಿನದ ಎರಡನೇ ಪಂದ್ಯದಲ್ಲಿ ಮಾಳೆಯಂಡ ತಂಡವು ಮುಂದಿನ ಹಂತ ಪ್ರವೇಶಿಸಿತು. ಮಾಳೆಯಂಡ ಮತ್ತು ಕಾಳೆಯಂಡ ತಂಡಗಳ ನಡುವಿನ ಸ್ಪರ್ಧೆಯಲ್ಲಿ ಕಾಳೇಯಂಡ ತಂಡ ಪಾಳ್ಗೊಳ್ಳದೇ ಇದ್ದುದರಿಂದ ವಾಕ್ಓವರ್‌ನಲ್ಲಿ ಮಾಳೇಯಂಡ ತಂಡ ಮುಂದಿನ ಹಂತ
ಪ್ರವೇಶಿಸಿತು.
ಕೈಬುಲಿರ ಮತ್ತು ಮಾಳೇಟಿರ (ಕುಕ್ಲೂರು) ತಂಡಗಳ ನಡುವೆ ನಡೆದ ಮೂರನೇ ಪಂದ್ಯದಲ್ಲಿ ಮಾಳೇಟಿರ ತಂಡ ಗೆಲುವು ದಾಖಲಿಸಿತು. ಎರಡು ತಂಡಗಳ ನಡುವೆ ಪ್ರಬಲ ಸೆಣಸಾಟ ನಡೆದು ಟೈಬ್ರೇಕರ್‌ನಲ್ಲಿ ಮಾಳೇಟಿರ ತಂಡವು 2-0 ಅಂತರದಲ್ಲಿ ಗೆಲುವು ಸಾಧಿಸಿತು.
ಕಲ್ಯಾಟಂಡ ಮತ್ತು ಅಪ್ಪಡೇರಂಡ ತಂಡಗಳ ಪಂದ್ಯದಲ್ಲಿ ಕಲ್ಯಾಟಂಡ ತಂಡವು 4-0 ಅಂತರದ ಗೆಲುವು ಸಾಧಿಸಿತು. ಕಲ್ಯಾಟಂಡ ತಂಡದ ಪರ ಕರಣ್ ಕುಟ್ಟಣ್ಣ, ತಿಮ್ಮಯ್ಯ ತಲಾ ಒಂದು ಗೋಲು ಗಳಿಸಿದರೆ, ಧನುಷ್ ಬೋಪಣ್ಣ ಎರಡು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೊಳ್ಳಂಡ ತಂಡವು ಚೆರಿಮಂಡ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಬೊಳ್ಳಂಡ ತಂಡದ ಪರ ಕಿರಣ್ ಕುಶಾಲಪ್ಪ ಒಂದು ಗೋಲು ದಾಖಲಿಸಿದರು.
ಕೊಟ್ಟಂಗಡ ಮತ್ತು ಮಾತ್ರಂಡ ತಂಡಗಳ ನಡುವೆ ಗೆಲುವಿಗಾಗಿ ಸಮಬಲದ ಹೋರಾಟ ನಡೆಯಿತು. ನಂತರ ನಡೆದ ಟೈಬ್ರೇಕರ್‌ನಲ್ಲಿ ಕೊಟ್ಟಂಗಡ ತಂಡವು 6-4 ಅಂತರದಲ್ಲಿ ಗೆಲುವು ಸಾಧಿಸಿತು. ಪುಟ್ಟಿಚಂಡ ಮತ್ತು ಕವುಡಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಪುಟ್ಟಿಚಂಡ
ತಂಡವು ಕವುಡಿಚಂಡ ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿತು.
ಕವುಡಿಚಂಡ ತಂಡದ ಪರ ಮಧುಮಾದಪ್ಪ ಎರಡು ಗೋಲು ಗಳಿಸಿದರು. ಪುಟ್ಟಿಚಂಡ ಬಿಪಿನ್ ಒಂದು ಗೋಲು ಗಳಿಸಿದರು. ಮೇಕತಂಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಯಪಂಡ ತಂಡವು ಭರ್ಜರಿ ಗೆಲುವು ಸಾಧಿಸಿತು. ಕಾಯಪಂಡ ತಂಡದ ಆಟಗಾರರಾದ ದಿನುವಿಜಯ ಮೂರು ಗೋಲು ದಾಖಲಿಸಿದರೆ ಮೋಹನ್ ಒಂದು ಗೋಲು ಗಳಿಸಿದರು.
ಮೇಕತಂಡ ತಂಡದ ಆಟಗಾರರು ಯಾವುದೇ ಗೋಲು ದಾಖಲಿಸಲಿಲ್ಲ. ಅಚ್ಚಾಂಡಿರ ತಂಡವು ಚಟ್ಟಂಡ ತಂಡದ ವಿರುದ್ಧ 3-0 ಅಂತರದ ಜಯಗಳಿಸಿತು. ಅಚ್ಚಾಂಡಿರ ತಂಡದ ಮಧುಮಂದಣ್ಣ ಅಜಯ್ ನಾಣಯ್ಯ ಹಾಗೂ ಅನೀಶ್ ಅಪ್ಪಚ್ಚು 3 ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಮೈದಾನ 1
4ಬಿಳಿಗ್ಗೆ 9ಗಂಟೆಗೆ ಮಾದೆಯಂಡ - ಅಮ್ಮಾಟಂಡ
4ಬೆಳಿಗ್ಗೆ 10 ಗಂಟೆಗೆ ಮುದ್ದಿಯಂಡ - ಕಬ್ಬಚ್ಚೀರ
4ಬೆಳಿಗ್ಗೆ 11 ಗಂಟೆಗೆ ಕೊರವಂಡ - ಮಲ್ಲಮಡ
4ಮಧ್ಯಾಹ್ನ 12 ಗಂಟೆಗೆ ನಾಮೇರ - ಮುಕ್ಕಾಟಿರ (ಪುಲಿಕೋಟು)
4ಮಧ್ಯಾಹ್ನ 1 ಗಂಟೆಗೆ ಮಾಣಿರ - ನಂದಿನೆರವಂಡ
4ಮಧ್ಯಾಹ್ನ 2 ಗಂಟೆಗೆ ಮನಿಯಪಂಡ - ನಂದೇಟಿರ
ಮೈದಾನ 2
4ಬೆಳಿಗ್ಗೆ ಕ್ಕೆ ಕುಟ್ಟಂಡ (ಕಾರ್ಮಾಡು) - ನೆರ್ಪಂಡ
4ಬೆಳಿಗ್ಗೆ 10 ಕ್ಕೆ ಪುತ್ತರಿರ - ಕೇಚೆಟ್ಟೀರ
4ಬೆಳಿಗ್ಗೆ 11 ಕ್ಕೆ ಪೊನ್ನೋಲತಂಡ - ನೆಲ್ಲೀರ
4ಮಧ್ಯಾಹ್ನ 12ಕ್ಕೆ ಚೆರುಮಂದಂಡ - ಪುಟ್ಟಿಮಾಡ
4ಮಧ್ಯಾಹ್ನ 1ಕ್ಕೆ ಅಲ್ಲುಮಾಡ - ಬೊಳದಂಡ
4ಮಧ್ಯಾಹ್ನ 2ಕ್ಕೆ ಐಚಂಡ - ಅಯ್ಯಮಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.