ADVERTISEMENT

ಕೊಡಗು | ಜಿಲ್ಲಾ ಪಂಚಾಯಿತಿಗೆ 29, ತಾಲ್ಲೂಕು ಪಂಚಾಯಿತಿಗಳಿಗೆ 50 ಸ್ಥಾನ ನಿಗದಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 4:17 IST
Last Updated 13 ಆಗಸ್ಟ್ 2024, 4:17 IST

ಮಡಿಕೇರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಕೊಡಗು ಜಿಲ್ಲಾ ಪಂಚಾಯಿತಿಗೆ 29 ಸ್ಥಾನಗಳನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಇದರಲ್ಲಿ ಮಡಿಕೇರಿ 7, ಸೋಮವಾರಪೇಟೆ, ಪೊನ್ನಂಪೇಟೆ ತಲಾ 6, ಕುಶಾಲನಗರ ಹಾಗೂ ವಿರಾಜಪೇಟೆ ತಲಾ 5 ಸ್ಥಾನಗಳನ್ನು ಹೊಂದಿವೆ.

ಮಡಿಕೇರಿಯು ಮಕ್ಕಂದೂರು, ಕಾಂತೂರು ಮೂರ್ನಾಡು, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಚೆಯ್ಯಂಡಾಣೆ (ನರಿಯಂದಡ), ಬೆಟ್ಟಗೇರಿ ಕ್ಷೇತ್ರಗಳನ್ನು, ಸೋಮವಾರಪೇಟೆಯು ಗೋಪಾಲಪುರ, ಕೊಡ್ಲಿಪೇಟೆ, ಅಬ್ಬೂರು ಕಟ್ಟೆ, ಶಾಂತಳ್ಳಿ, ಬೇಳೂರು ಬಸವನಹಳ್ಳಿ, ಮಾದಾಪುರ ಕ್ಷೇತ್ರಗಳನ್ನು, ಕುಶಾಲನಗರವು ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ವಾಲ್ನೂರು ತ್ಯಾಗತ್ತೂರು, ಸುಂಟಿಕೊಪ್ಪ ಕ್ಷೇತ್ರಗಳನ್ನು, ವಿರಾಜಪೇಟೆಯು, ಬಿಟ್ಟಂಗಾಲ, ಅಮ್ಮತ್ತಿ, ಚೆನ್ನಯ್ಯನಕೋಟೆ, ಸಿದ್ದಾಪುರ, ಹಾಲುಗುಂದ ಕ್ಷೇತ್ರಗಳನ್ನು, ಪೊನ್ನಂಪೇಟೆಯು ಬಾಳೆಲೆ, ಗೋಣಿಕೊಪ್ಪಲು, ತಿತಿಮತಿ, ಶ್ರೀಮಂಗಲ, ಪೊನ್ನಂಪೇಟೆ, ಟಿ.ಶೆಟ್ಟಿಗೇರಿ ಕ್ಷೇತ್ರಗಳನ್ನು ಒಳಗೊಂಡಿದೆ.

ADVERTISEMENT

5 ತಾಲ್ಲೂಕು ಪಂಚಾಯಿತಿಗಳಿಗೆ 50 ಸ್ಥಾನ

ಕೊಡಗು ಜಿಲ್ಲೆಯ 5 ತಾಲ್ಲೂಕುಗಳಿಗೆ ಒಟ್ಟು 50 ಸ್ಥಾನ ಕಲ್ಪಿಸಲಾಗಿದೆ. ಇವುಗಳಲ್ಲಿ ಮಡಿಕೇರಿ ತಾಲ್ಲೂಕಿಗೆ 12, ಪೊನ್ನಂಪೇಟೆಗೆ 11, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ತಾಲ್ಲೂಕುಗಳಿಗೆ ತಲಾ 9 ಸ್ಥಾನಗಳನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.