ADVERTISEMENT

ನೆಲ್ಯಹುದಿಕೇರಿ ಮುತ್ತಪ್ಪ ತೆರೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 5:28 IST
Last Updated 9 ಫೆಬ್ರುವರಿ 2024, 5:28 IST

ಸಿದ್ದಾಪುರ: ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ 31ನೇ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವವು ಫೆ. 17 ಹಾಗೂ 18 ರಂದು ನಡೆಯಲಿದೆ.

ಫೆ.17 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 5.30 ಕ್ಕೆ ಧ್ವಜಾರೋಹಣವನ್ನು ತೋಟಂಬೈಲು ಬಿ.ತಿಮ್ಮಯ್ಯ ಅವರು ನೆರವೇರಿಸಲಿದ್ದಾರೆ. 5.45 ಕ್ಕೆ ಉತ್ಸವವನ್ನು ಎಸ್.ಎನ್.ಡಿ.ಪಿ. ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಕೆ ಲೋಕೇಶ್ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ಎಂ.ಬಿ ಮೊಣ್ಣಪ್ಪ ಉದ್ಘಾಟಿಸುವರು. ಸಂಜೆ 6.30 ಕ್ಕೆ ಮುತ್ತಪ್ಪನ ಕಲಶವನ್ನು ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ತರುವುದು, ಸಂಜೆ 6 ಕ್ಕೆ ಮುತ್ತಪ್ಪನ ಮಲೆ ಇಳಿಸುವುದು, 6.30ಕ್ಕೆ ವೆಳ್ಳಾಟ್ಟಂ, ರಾತ್ರಿ 8ಕ್ಕೆ ಶಾಸ್ತ ವೆಳ್ಳಾಟ್ಟಂ, ರಾತ್ರಿ 9 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಕ್ಕೆ  ಭಗವತಿ ವೆಳ್ಳಾಟ್ಟಂ, ರಾತ್ರಿ 11 ಕ್ಕೆ ಗುಳಿಗನ ವೆಳ್ಳಾಟ್ಟಂ ನಡೆಯಲಿದೆ.

ಫೆ. 18ರಂದು ಬೆಳಿಗ್ಗೆ 5 ಗಂಟೆಗೆ ಗುಳಿಗನ ತೆರೆ, 5.30 ಕ್ಕೆ ಶಾಸ್ತ ತೆರೆ, ಬೆಳಗ್ಗೆ 6 ಗಂಟೆಗೆ ತಿರುವಪ್ಪನ ತೆರೆ, ಬೆಳಿಗ್ಗೆ 9 ಗಂಟೆಗೆ ಭಗವತಿ ತೆರೆ,  ಅನ್ನ ಸಂತರ್ಪಣೆ ನಡೆಯಲಿದೆ ಎಂದುಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.