ADVERTISEMENT

33 ಯೂನಿಟ್ ರಕ್ತ ಸಂಗ್ರಹ

ಮಡಿಕೇರಿಯಲ್ಲಿ ನಡೆದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 5:47 IST
Last Updated 1 ಜುಲೈ 2024, 5:47 IST
   

ಮಡಿಕೇರಿ: ಇಲ್ಲಿ ಬಾಲಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 33 ಮಂದಿ ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.

ಕೂರ್ಗ್ ಬ್ಲಡ್ ಫೌಂಡೇಷನ್ ಕರ್ನಾಟಕದ 3ನೇ ವರ್ಷ ವಾರ್ಷಿಕೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹ್ಯುಮಾನಿಟಿ ಫಸ್ಟ್ ಇಂಡಿಯಾ ಮಡಿಕೇರಿ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಈ ವೇಳೆ 35ಕ್ಕೂ ಅಧಿಕ ರಕ್ತದಾನ ಮಾಡಿರುವ ವಿನೋದ್, 50ಕ್ಕೂ ಅಧಿಕ ರಕ್ತದಾನ ಮಾಡಿರುವ ರಾಮಪ್ಪ, ಸಮಾಜ ಸೇವಕ ಕ್ರಿವೇಟಿವ್ ಖಲೀಲ್ ಹಾಗೂ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಡಾ.ಕರುಂಬಯ್ಯ, ‘ರಕ್ತ ಅಗತ್ಯ ತೀರಾ ಇದೆ. ಆದರೆ, ರಕ್ತದಾನಿಗಳು ಮುಂದೆ ಬರುತ್ತಿರುವುದು ಕಡಿಮೆ. ಇತ್ತೀಚೆಗೆ ರಕ್ತದಾನ ಮಾಡಲು ಜನರು ಬರುತ್ತಿದ್ದಾರೆ. ಇವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು’ ಎಂದರು.

ವಿನೋದ್ ಮಾತನಾಡಿ, ‘ದೇಶಸೇವೆ ಮಾಡಿ ಬಂದಿದ್ದು, ಈಗ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಇಲ್ಲಿ ಸೇವೆ ಮಾಡಬೇಕು ಎಂದು ಕೊಂಡಾಗ ನನಗೆ ಹೊಳೆದದ್ದು ದೇಹದಾನ ಮತ್ತು ರಕ್ತದಾನ. ಈಗ ನಾನಾಗೆ ಬಂದು ರಕ್ತದಾನ ಮಾಡಿದ್ದೇನೆ. ಎಲ್ಲರೂ ತಾವಾಗಿಯೇ ರಕ್ತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ರಾಮಪ್ಪ ಮಾತನಾಡಿ, ‘ನಾನು 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದೇನೆ. ಇದು ತೃಪ್ತಿ ಕೊಟ್ಟಿದೆ. ಇದೊಂದು ಬಗೆಯ ಸೇವೆ’ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ‘ಸದ್ದಿಲ್ಲದೇ ಕೂರ್ಗ್ ಬ್ಲಡ್ ಫೌಂಡೇಷನ್ ಸೇವ ಕಾರ್ಯ ಮಾಡುತ್ತಿದೆ. ಇದರ ಸ್ಥಾಪಕ ಸಮೀರ್ ಹಾಗೂ ಅಧ್ಯಕ್ಷ ವಿನು ಅವರ ಸೇವೆ ಅನನ್ಯವಾದುದು’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.