ಸುಂಟಿಕೊಪ್ಪ: ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ‘ಕೌಶಲಾಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ’ದಲ್ಲಿ 4 ದಿನಗಳ ತರಬೇತಿಗೆ ಚಾಲನೆ ನೀಡಲಾಯಿತು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರವನ್ನು ಪಿಡಿಒ ಲೋಕೇಶ್ ಹಾಗೂ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಉದ್ಘಾಟಿಸಿದರು.
ಲೋಕೇಶ್ ಮಾತನಾಡಿ, ‘ಉದ್ಯೋಗದ ನಿಮಿತ್ತ ಇರುವ ತರಬೇತಿ ಇದಾಗಿದ್ದು, ಯುವಕರು ಒಳ್ಳೆಯ ಹುದ್ದೆಗಳಿಗೆ ಸೇರಿ ಬದುಕನ್ನು ಕಟ್ಟಿಕೊಳ್ಳಲಿ’ ಎಂದರು.
20ಕ್ಕೂ ಹೆಚ್ಚು ಮಂದಿ ತರಬೇತಿಯ ಸದುಪಯೋಗ ಪಡೆದುಕೊಂಡರು. ಶಿಕ್ಷಣ ಫೌಂಡೇಷನ್ ಜಿಲ್ಲಾ ತರಬೇತುದಾರ ರಕ್ಷಿತ್ ಹಾಗೂ ವ್ಯವಸ್ಥಾಪಕ ತರಬೇತಿ ದಿಲೀಪ್ ನೀಡಿದರು. ಗ್ರಂಥಪಾಲಕಿ ಸಾನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.