ADVERTISEMENT

ನಾಲೆಯ ತಡೆಗೋಡೆಯ ಅಕ್ಕಪಕ್ಕ ಮಣ್ಣು ಹಾಕದೇ‌ ನಿರ್ಲಕ್ಷ್ಯ: ಸಾರ್ವಜನಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:48 IST
Last Updated 24 ಜೂನ್ 2024, 4:48 IST
ಸುಂಟಿಕೊಪ್ಪ ಸಮೀಪದ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲೆಗೆ ತಡೆಗೋಡೆ ನಿರ್ಮಿಸಿದ ಗುತ್ತಿಗೆದಾರರು ಎರಡು ಕಡೆ ಮಣ್ಣು ಹಾಕದೇ ಇರುವುದು.
ಸುಂಟಿಕೊಪ್ಪ ಸಮೀಪದ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲೆಗೆ ತಡೆಗೋಡೆ ನಿರ್ಮಿಸಿದ ಗುತ್ತಿಗೆದಾರರು ಎರಡು ಕಡೆ ಮಣ್ಣು ಹಾಕದೇ ಇರುವುದು.   

ಸುಂಟಿಕೊಪ್ಪ: ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಐಗೂರು ಗ್ರಾಮ ಪಂಚಾಯಿತಿಯ ಚಿನ್ನಳ್ಳಿಯ ಐಗೂರಿನ ನಾಲೆಗೆ ತಡೆಗೋಡೆ ನಿರ್ಮಿಸಿದ್ದು, ತಡೆಗೋಡೆಯ ಅಕ್ಕಪಕ್ಕ ಮಣ್ಣು ಹಾಕದೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ತಡೆಗೋಡೆ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರು ಯಂತ್ರೋಪಕರಣದೊಂದಿಗೆ ಪಲಾಯನ ಮಾಡಿದ್ದಾರೆ. ತಡೆಗೋಡೆಯ ಎರಡು ಕಡೆ ಮಣ್ಣು ತುಂಬಿಸುವ ಕೆಲಸ ಮಾಡದೇ ಇದ್ದುದರಿಂದ‌ ಸ್ಥಳೀಯರು ಕಾವೇರಿ ನೀರಾವರಿ ಎಂಜಿನಿಯರ್‌ಗೆ ಒತ್ತಡ ತಂದಿದ್ದರಿಂದ ಹೇರಿದ್ದರಿಂದ ಬೇಕಾಬಿಟ್ಟಿ ಕಾಂಕ್ರಿಟ್ ತಡೆಗೋಡೆಗೆ ಎರಡು ಬದಿ ಮಣ್ಣು ತುಂಬಿಸಿದ್ದಾರೆ.

ಐಗೂರು ಗ್ರಾಮದ ಜಿ.ಕೆ. ಬಾಲಕೃಷ್ಣ ಹಾಗೂ ಪಿ.ಕೆ. ಸೋಮಯ್ಯ ಅವರ ಜಾಗದಲ್ಲೂ ತಡೆಗೋಡೆಗೆ ಮಣ್ಣು ತುಂಬಿಸದೆ ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. 

ADVERTISEMENT

‘ಕಾಮಗಾರಿಯಲ್ಲಿ ರಾಜಕೀಯ ಇದೆಯಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಸರ್ಕಾರ ಜನರ ಹಿತಾಸಕ್ತಿಗೆ ಆದ್ಯತೆ ನೀಡಿ ಕಾಮಗಾರಿ ಕೆಲಸಗಳನ್ನು ನಿರ್ವಹಿಸುತ್ತಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.