ಮಡಿಕೇರಿ: ನ. 26ರಿಂದ ತೆಲಂಗಾಣ ರಾಜ್ಯದ ಹೈದರಾಬಾದ್ನಲ್ಲಿ ನಡೆಯಲಿರುವ 14ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ನ್ಯಾಷನಲ್ ಚಾಂಪಿಯನ್ ಶಿಪ್-2024 ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದ ವಿದ್ಯಾರ್ಥಿನಿ ಅಕ್ಷರಾ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಇವರು ತಂಡದಲ್ಲಿ ಸೆಂಟರ್ ಫಾರ್ವರ್ಡ್ ಆಟಗಾರ್ತಿಯಾಗಿದ್ದಾರೆ.
ಇವರು ಮಡಿಕೇರಿ ನಗರಸಭೆ ಸದಸ್ಯೆ ಶ್ವೇತಾ ಹಾಗೂ ಕೆ.ಟಿ.ಪ್ರಶಾಂತ್ ಅವರ ಪುತ್ರಿಯಾಗಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ಪ್ರೌಢಶಾಲೆಯ 10ನೇ ವಿದ್ಯಾರ್ಥಿನಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.