ADVERTISEMENT

ಎ.ಎಲ್‌.ಜಿ ಕ್ರೆಸೆಂಟ್‌ ಶಾಲೆ; ಶೇ 97 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 17 ಮೇ 2024, 5:11 IST
Last Updated 17 ಮೇ 2024, 5:11 IST

ಮಡಿಕೇರಿ: ಎ.ಎಲ್‌.ಜಿ ಕ್ರೆಸೆಂಟ್‌ ಶಾಲೆಯ ಸಿಬಿಎಸ್‌ಇ ಪಠ್ಯಕ್ರಮದ 2023-24ನೇ ಸಾಲಿನ ಪರೀಕ್ಷೆಯಲ್ಲಿ ಶೇ 97ರಷ್ಟು ಫಲಿತಾಂಶ ಪಡೆದಿದೆ.

ಉನ್ನತ ಶ್ರೇಣಿಯಲ್ಲಿ ಮೊಹಮ್ಮದ್‌ ಲಬೀಬ್‌ ಅನ್ಸರಿ, ಎಂ.ಫಾತೀಮ ರಿಫಾ, ಕೆ.ಎಂ.ಅನ್ಸಿಫ್ ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಎಂ.ಎಸ್‌.ಅಲ್‌ಫೀಯ ಸುರುರ್‌, ನವೀದ್‌ ಪಾಷ, ಆಯಿಷಾ ರಮ್ಷ, ಮೊಹಮ್ಮದ್‌ ಸಾಹಿಲ್‌ ಹುಸೈನ್‌ ಮತ್ತು ವಿ.ಎಂ.ಮೊಹಮ್ಮದ್‌ ಸಿನಾನ್‌ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ADVERTISEMENT

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು, ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.

ಪ್ರಿ- ಕೆಜಿ ಯಿಂದ 9ನೇ ತರಗತಿವರೆಗೆ ದಾಖಲಾತಿ ಆರಂಭವಾಗಿದೆ. ಅದರಲ್ಲಿ ಪ್ರಿ-ಕೆಜಿ ಗೆ ಪ್ರವೇಶ ಪಡೆಯುವ ಮಕ್ಕಳಿಗೆ ದಾಖಲಾತಿ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.