ADVERTISEMENT

ಸೋಮವಾರಪೇಟೆ: ಅಂಗಾರಕ ಸಂಕಷ್ಟಿ ಪೂಜೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 3:56 IST
Last Updated 21 ನವೆಂಬರ್ 2024, 3:56 IST
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ವಿದ್ಯಾಗಣಪತಿ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ನವಿಲುಗರಿಗಳಿಂದ ಅಲಂಕರಿಸಲಾಗಿತ್ತು
ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ವಿದ್ಯಾಗಣಪತಿ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ನವಿಲುಗರಿಗಳಿಂದ ಅಲಂಕರಿಸಲಾಗಿತ್ತು   

ಸೋಮವಾರಪೇಟೆ: ಪಟ್ಟಣದ ಹಲವು ದೇವಾಲಯಗಳಲ್ಲಿ ಮಂಗಳವಾರ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿದ್ಯಾಗಣಪತಿ ದೇವಾಲಯದಲ್ಲಿ ಗಣಪತಿಯನ್ನು ನವಿಲುಗರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಚಂದ್ರಶೇಖರ ಶಾಸ್ತ್ರಿಗಳ ನೇತೃತ್ವದಲ್ಲಿ ರಾಕೇಶ್ ಶಾಸ್ತ್ರಿ ಹಾಗೂ ರಾಜಣ್ಣ ದೇವರಿಗೆ ಅರ್ಚನೆ, ಅಷ್ಟೋತ್ತರ, ಷೋಡಶೋಪಚಾರ ನಂತರ ಮಹಾಮಂಗಳಾರತಿ ನೆರವೇರಿಸಿದರು.

ಬಸವೇಶ್ವರ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ಶ್ರೀಗಂಧದಿಂದ ಅಲಂಕರಿಸಿ ಅರ್ಚಕ ಶೇಖಯ್ಯ ಶಾಸ್ತ್ರಿಗಳು ವಿಶೇಷ ಪೂಜೆ, ಮಂಗಳಾರತಿ ನಡೆಸಿದರು. ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ ಭಟ್‌ ಹಾಗೂ ರವಿಶಂಕರ್ ದೇವರಿಗೆ ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು.

ADVERTISEMENT
ಸೋಮವಾರಪೇಟೆ ಬಸವೇಶ್ವರ ದೇವಾಲಯದಲ್ಲಿ ಗಣಪತಿ ಮೂರ್ತಿಯನ್ನು ಶ್ರೀಗಂಧದಿಂದ  ಅಲಂಕರಿಸಿ ಅರ್ಚಕ ಶೇಖಯ್ಯ ಶಾಸ್ತ್ರಿಗಳು ವಿಶೇಷ ಪೂಜೆಮಂಗಳಾರತಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.