ADVERTISEMENT

ನಾಪೋಕ್ಲು: ಪಾಕ ದುರ್ಗಾಪರಮೇಶ್ವರಿ ದೇಗುಲದ ವಾರ್ಷಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 5:34 IST
Last Updated 17 ಡಿಸೆಂಬರ್ 2023, 5:34 IST
ನಾಪೋಕ್ಲು ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು.
ನಾಪೋಕ್ಲು ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು.   

ನಾಪೋಕ್ಲು: ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ದುರ್ಗಾಪರಮೇಶ್ವರಿ ದೇಗುಲದ ವಾರ್ಷಿಕ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಅಧಿಕ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಹರಕೆ ಸಲ್ಲಿಸಿದರು. ಬೆಳಿಗ್ಗೆ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಪಾಕಹೊಳೆಯಲ್ಲಿ ಗಂಗಾ ಪೂಜೆ ನಡೆಯಿತು. ಪಾಕ ನದಿಯ ಮೀನುಗಳಿಗೆ ಭಕ್ತರು ಅಕ್ಕಿಯನ್ನು ಹಾಕಿ ದೇವಾಲಯಕ್ಕೆ ಬಂದು ಹರಕೆಯನ್ನು ಸಲ್ಲಿಸಿದರು.

ಮುಕ್ಕಾಟಿ ಐನ್ ಮನೆಗೆ ತೆರಳಿ ದುರ್ಗಾಪರಮೇಶ್ವರಿಗೆ ತೊಡಿಸುವ ಅಲಂಕಾರದ ವಸ್ತುಗಳನ್ನು ತಂದು  ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಊರಿನವರು ತಂದ ಅಕ್ಕಿಯನ್ನು ಪಾಯಸ ಮಾಡಿ ಭಕ್ತರಿಗೆ ವಿತರಿಸಲಾಯಿತು. ಕಳಸ ಪೂಜೆ, ಹರಕೆ ಸಲ್ಲಿಕೆ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.