ವಿರಾಜಪೇಟೆ: ಸಮೀಪದ ಕಾಕೋಟು ಪರಂಬುವಿನಲ್ಲಿನ ಬ್ಯಾಂಕ್ ಆಫ್ ಬರೋಡಾ ದರೋಡೆ ನಡೆಸಲು ಈಚೆಗೆ ವಿಫಲ ಯತ್ನ ನಡೆದಿದೆ.
ದರೋಡೆಕೋರರು ಬ್ಯಾಂಕ್ ಗೋಡೆಗೆ ಕಿಂಡಿ ಕೊರೆದು ದರೋಡೆಗೆ ಸಂಚು ನಡೆಸಿರುವುದು ತಿಳಿದುಬಂದಿದೆ. ಸಿಸಿಟಿವಿಯ ಕ್ಯಾಮೆರಾಗಳಿಗೆ ಸ್ಪ್ರೆ ಮಾಡಿ ಗುರುತು ಮರೆ ಮಾಡಲು ಯತ್ನಿಸಲಾಗಿದೆ. ಜೊತೆಗೆ ಕ್ಯಾಮೆರಾ ರೆಕಾರ್ಡಿಂಗ್ನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ.
ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ವಿಧಿ ವಿಜ್ಞಾನ, ಬೆರಳಚ್ಚು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.