ADVERTISEMENT

ವಿರಾಜಪೇಟೆ | ಎಂಡಿಎಂಎ, ಗಾಂಜಾ ಮಾರಾಟಕ್ಕೆ ಯತ್ನ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:23 IST
Last Updated 19 ನವೆಂಬರ್ 2024, 14:23 IST
<div class="paragraphs"><p>ಬಂಧನ (ಪ್ರಾತಿನಿಧಿಕ ಚಿತ್ರ)</p></div>

ಬಂಧನ (ಪ್ರಾತಿನಿಧಿಕ ಚಿತ್ರ)

   

ವಿರಾಜಪೇಟೆ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಇಲ್ಲಿನ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಸುಜೇಶ್ ಎಂ.ಕೆ, ಜಂಶೀರ್, ತಲಚೇರಿಯ ಶಮ್ಮಾಶ್ ಸಿ.ವಿ, ವಿರಾಜಪೇಟೆ ಮರೂರು ಗ್ರಾಮದ ಜಬ್ಬರ್ ಯು.ವೈ ಹಾಗೂ ಮೊಹಮದ್ ಕುಂಞಿ ಬಂಧಿತರು. ಸಮೀಪದ ಆರ್ಜಿ ಗ್ರಾಮದ ಕಿರುಮಕ್ಕಿ–ಕಂಡಿಮಕ್ಕಿ ಜಂಕ್ಷನ್‌ನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿದರು.

ADVERTISEMENT

ಆರೋಪಿಗಳಿಂದ 84 ಗ್ರಾಂ ಎಂಡಿಎಂಎ ಹಾಗೂ 7 ಗ್ರಾಂ ಗಾಂಜಾ, ಒಂದು ಕಾರು, ಒಂದು ಡಿಜಿಟಲ್ ತೂಕದ ಯಂತ್ರ ಹಾಗೂ ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣವನ್ನು ವಶಕ್ಕೆ ಪಡೆದಿದ್ದಾರೆ.

ಡಿವೈಎಸ್ಪಿ ಮೋಹನ್ ಕುಮಾರ್ ನಿರ್ದೇಶನದಲ್ಲಿ ಸಿಪಿಐ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ಹಾಗೂ ವಿರಾಜಪೇಟೆ ನಗರ ಠಾಣೆಯ ಎಸ್‌ಐ ಪ್ರಮೋದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.