ADVERTISEMENT

‘ಕೊಡಗಿನ ಕಿತ್ತಳೆ ಗತವೈಭವಕ್ಕೆ ಮರಳಲಿ’

ಕಿತ್ತಳೆ ಸಹಕಾರ ಸಂಘ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 5:55 IST
Last Updated 14 ಮಾರ್ಚ್ 2024, 5:55 IST
ಗೋಣಿಕೊಪ್ಪಲು ಬಳಿಯ ಪಾಲಿಬೆಟ್ಟ ಕಿತ್ತಳೆ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಅರವಿಂದ ಕುಟ್ಟಪ್ಪ, ಕೆ.ಯು.ಪೂಣಚ್ಚ, ಸುನಿಲ್ ಮಾದಪ್ಪ,ಎಸ್.ಎಂ ವಿಶ್ವನಾಥ್, ಎಸ್.ಎಸ್ ಸುರೇಶ್, ಚಂದ್ರಿಮಾಡ.ಸಿ.ಕಾಳಯ್ಯ, ಬಾನಂಡ ಪೃಥ್ಯು ಪಾಲ್ಗೊಂಡಿದ್ದರು
ಗೋಣಿಕೊಪ್ಪಲು ಬಳಿಯ ಪಾಲಿಬೆಟ್ಟ ಕಿತ್ತಳೆ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಅರವಿಂದ ಕುಟ್ಟಪ್ಪ, ಕೆ.ಯು.ಪೂಣಚ್ಚ, ಸುನಿಲ್ ಮಾದಪ್ಪ,ಎಸ್.ಎಂ ವಿಶ್ವನಾಥ್, ಎಸ್.ಎಸ್ ಸುರೇಶ್, ಚಂದ್ರಿಮಾಡ.ಸಿ.ಕಾಳಯ್ಯ, ಬಾನಂಡ ಪೃಥ್ಯು ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ‘ಕೊಡಗು ಕಿತ್ತಳೆ, ಕಿತ್ತಳೆ ಎಂದರೆ ಕೊಡಗು ಎಂಬ ಹೆಸರು ಒಂದು ಕಾಲದಲ್ಲಿ ರಾರಾಜಿಸಿತ್ತು. ಬದಲಾದ ಕಾಲಘಟ್ಟದಲ್ಲಿ ಇದೆಲ್ಲವೂ ತೆರೆ ಮರೆಗೆ ಸರಿಯಿತು. ಇದನ್ನು ಮತ್ತೆ ಗತವೈಭವಕ್ಕೆ ಮರಳಿಸಬೇಕು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಪಾಲಿಬೆಟ್ಟದಲ್ಲಿರುವ ಗೋಣಿಕೊಪ್ಪಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ನಿವೇಶನದಲ್ಲಿ ಸಮುದಾಯ ಭವನ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬದಲಾದ ಹವಾಮಾನದಿಂದಾಗಿ ಕಿತ್ತಳೆಯೂ ಕೂಡ ಮಾರ್ಪಾಡು ಹೊಂದಿತ್ತು. ಕಿತ್ತಳೆ ಇದ್ದರೂ ಹಿಂದಿನ ತನ್ನ ಸ್ವಾದಿಷ್ಟತೆಯನ್ನು ಹೊಂದಿಲ್ಲ. ಇದಕ್ಕೆ ಹವಾಮಾನದ ವೈಪರೀತ್ಯವೇ ಕಾರಣ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಿತ್ತಳೆ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ‘ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಗೊಂಡರೆ ಸಂಘವನ್ನು ಆರ್ಥಿಕವಾಗಿ ಬಲಪಡಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಎಂ.ಕೆ.ಅರವಿಂದ್, ನಿರ್ದೇಶಕರಾದ ಕೆ.ಯು. ಪೂಣಚ್ಚ, ಸುನಿಲ್ ಮಾದಪ್ಪ, ಎಸ್.ಎಂ ವಿಶ್ವನಾಥ್, ಎಸ್.ಎಸ್ ಸುರೇಶ್, ಚಂದ್ರಿಮಾಡ ಸಿ.ಕಾಳಯ್ಯ, ಬಾನಂಡ. ಪೃಥ್ಯು, ಸುಳ್ಳಿಮಾಡ ಟಿ.ಕಾವೇರಪ್ಪ, ಕೆ.ಬಿ.ಸುಮನ್, ತಮ್ಮು ಪೂವಯ್ಯ, ಸುಮಿ ಸುಬ್ಬಯ್ಯ, ಶೋಭ ಕುಟ್ಟಪ್ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ವಿ.ಹೇಮಂತ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.