ADVERTISEMENT

ಸೌಹಾರ್ದಕ್ಕೆ ಸಾಕ್ಷಿಯಾದ ಬೋಯಿಕೇರಿ; ಹಿಂದೂ, ಮುಸ್ಲಿಮರಿಂದ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 20:19 IST
Last Updated 12 ಸೆಪ್ಟೆಂಬರ್ 2024, 20:19 IST
<div class="paragraphs"><p><strong>ಸುಂಟಿಕೊಪ್ಪ ಸಮೀಪದಬೋಯಿಕೇರಿಯಲ್ಲಿ ಹಿಂದೂ ಮುಸ್ಲಿಮರ ಸಹೋದರತೆಯ ಭಾವಕ್ಯತೆಯು ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಇಡೀ ಸಮಾಜಕ್ಕೆ‌ ಸಾರಿದರು..</strong></p></div>

ಸುಂಟಿಕೊಪ್ಪ ಸಮೀಪದಬೋಯಿಕೇರಿಯಲ್ಲಿ ಹಿಂದೂ ಮುಸ್ಲಿಮರ ಸಹೋದರತೆಯ ಭಾವಕ್ಯತೆಯು ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಇಡೀ ಸಮಾಜಕ್ಕೆ‌ ಸಾರಿದರು..

   

ಸುಂಟಿಕೊಪ್ಪ/ಸಿದ್ದಾಪುರ (ಕೊಡಗು ಜಿಲ್ಲೆ): ಸಮೀಪದ ಬೋಯಿಕೇರಿಯ ಸಿದ್ಧಿ ಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಮುಸ್ಲಿಮರೂ ಭಾಗವಹಿಸಿ ಭಾವೈಕ್ಯ ಮೆರೆದರು. ನೀರು, ಸಿಹಿತಿಂಡಿ, ಕೇಕ್, ತಂಪು ಪಾನೀಯ ವಿತರಿಸಿದರು.

ಮಸೀದಿಯ ಮುಂಭಾಗ ಬಂದ ಮೆರವಣಿಗೆಯನ್ನು ಸೇರಿಸಿಕೊಂಡ ಅವರು, ಎಲ್ಲರಿಗೂ ಸಿಹಿತಿಂಡಿ ವಿತರಿಸಿ ಶುಭ ಕೋರಿದರು. ಸ್ಥಳೀಯರಾದ ಗಣೇಶ್, ಸ್ವಾಗತ್, ರಮೇಶ್, ರೆಹಮತ್ ಖಾನ್, ಸಮ್ಮದ್, ಜಲೀಲ್, ಸಿದ್ದೀಕ್, ಬಸೀರ್ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಸಿದ್ದಾಪುರದ ನೆಲ್ಯಹುದಿಕೇರಿ ಗ್ರಾಮದ ಗೌರಿ ಗಣೇಶ ಆಚರಣಾ ಸಮಿತಿಯಲ್ಲಿ ಹಿಂದೂ, ಮುಸ್ಲಿಮ್ ಹಾಗೂ ಕ್ರೈಸ್ತ ಧರ್ಮದ ಯುವಕರಿದ್ದು, ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.

ಗ್ರಾಮದ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯು 12 ವರ್ಷಗಳಿಂದ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದೆ. ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕ್ರೈಸ್ತ ಧರ್ಮದ ಯುವಕ ಕ್ಸೇವಿಯಾರ್ ಹಾಗೂ ಸಮಿತಿ ಸದಸ್ಯರಾಗಿ ಮುಸ್ಲಿಂ ಧರ್ಮದ ಯುವಕ ನೌಫಲ್ ಸೇವೆ ಸಲ್ಲಿಸುತ್ತಿದ್ದಾರೆ.

‘ನಾನು ಎರಡು ವರ್ಷಗಳಿಂದ ಅಧ್ಯಕ್ಷನಾಗಿದ್ದು, ಗ್ರಾಮದ ಯುವಕರೆಲ್ಲರೂ ಒಗ್ಗಟ್ಟಿನಿಂದ ಉತ್ಸವವನ್ನು ನಡೆಸಿದ್ದೇವೆ’ ಎಂದು ಕ್ಸೇವಿಯಾರ್ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.