ಮಡಿಕೇರಿ: ‘ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು ಹೊರ ಹೊಮ್ಮುತ್ತವೆ’ ಎಂದು ಸಾಹಿತಿ ಭಾರದ್ವಾಜ್ ಹೇಳಿದರು.
ಕವಯತ್ರಿ ಕೃಪಾ ದೇವರಾಜ್ ಅವರ ‘ಕಾರ್ಪಣ್ಯದ ಹೂವು’ ಕವನ ಸಂಕಲನವನ್ನು ಅವರು ಕಣಿವೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಬೆಂಗಳೂರಿನ ಲೇಖಕ ಇರ್ಫಾನ್ ಮಾತನಾಡಿ, ‘ಕೊಡಗಿನ ಸುಂದರ ಪರಿಸರ ಲೇಖರಿಗೆ ಸುಂದರ ವಿಷಯ ಒದಗಿಸುತ್ತದೆ’ ಎಂದರು.
ಲೇಖಕಿ ಕೃಪಾದೇವರಾಜ್ ಮಾತನಾಡಿ, ‘ಸರಳತೆ ಬಯಸುವ ನಾನು, ಕಥಾ ಸಂಕನವನ್ನೂ ಅದ್ಧೂರಿಯಾಗಿ ಬಿಡುಗಡೆ ಮಾಡಲು ಬಯಸಲಿಲ್ಲ’ ಎಂದರು.
ಬರಹಗಾರ ನೌಶದ್ ಜನ್ನತ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ, ಚುಟುಕ ಕವಿ ಹಾ.ತಿ.ಜಯಪ್ರಕಾಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.