ADVERTISEMENT

ಮಡಿಕೇರಿ- ಕರಿಕೆ ನಡುವೆ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 7:05 IST
Last Updated 17 ಮಾರ್ಚ್ 2024, 7:05 IST
ಮಡಿಕೇರಿ- ಕರಿಕೆ ನಡುವೆ ಶನಿವಾರ ನೂತನ ಬಸ್ ಸಂಚಾರ ಆರಂಭಗೊಂಡಿದ್ದು ಚಾಲಕ -ನಿರ್ವಾಹಕರನ್ನು ಎಳ್ಳುಕೊಚ್ಚಿಯಲ್ಲಿ ಅಭಿನಂದಿಸಲಾಯಿತು
ಮಡಿಕೇರಿ- ಕರಿಕೆ ನಡುವೆ ಶನಿವಾರ ನೂತನ ಬಸ್ ಸಂಚಾರ ಆರಂಭಗೊಂಡಿದ್ದು ಚಾಲಕ -ನಿರ್ವಾಹಕರನ್ನು ಎಳ್ಳುಕೊಚ್ಚಿಯಲ್ಲಿ ಅಭಿನಂದಿಸಲಾಯಿತು   

ನಾಪೋಕ್ಲು: ಮಡಿಕೇರಿ-ಕರಿಕೆ ನಡುವೆ ಶನಿವಾರದಿಂದ ಹೊಸ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ.ಶುಕ್ರವಾರ ಶಾಸಕ ಎ.ಎಸ್. ಪೊನ್ನಣ್ಣ ಕರಿಕೆಗೆ ಆಗಮಿಸಿದ್ದ ಸಂದರ್ಭ ಬಸ್ ಸೌಲಭ್ಯಬೇಕೆಂಬ ಕೋರಿಕೆಯನ್ನು ಪರಿಗಣಿಸಿ ತಕ್ಷಣವೇ ಬಸ್ ಸಂಚಾರ ಆರಂಭಿಸಲು ಆದೇಶಿಸಿದ್ದಾರೆ.

ಮಡಿಕೇರಿಯಿಂದ 7.30ಕ್ಕೆ ಹೊರಡುವ ಬಸ್ 10.15 ಕ್ಕೆ ಕರಿಕೆ ತಲುಪಲಿದೆ. 10.30 ಕ್ಕೆ ಕರಿಕೆಯಿಂದ ಹೊರಟು ಮಧ್ಯಾಹ್ನ 1-15ಕ್ಕೆ ಮಡಿಕೇರಿ ತಲುಪಲಿದೆ. ಇನ್ನೊಂದು ಬಸ್ ಮಧ್ಯಾಹ್ನ 1ಗಂಟೆಗೆ ಮಡಿಕೇರಿಯಿಂದ ಹೊರಟು 3-45ಕ್ಕೆ ಕರಿಕೆ ತಲುಪಲಿದೆ. ಸಂಜೆ 4ಕ್ಕೆ ಕರಿಕೆಯಿಂದ ಹೊರಟು 6.45ಕ್ಕೆ ಮಡಿಕೇರಿ ತಲುಪಲಿದೆ. ಶನಿವಾರ ಬಸ್ ಸಂಚಾರ ಆರಂಭಗೊಂಡಿದ್ದು ಚಾಲಕ -ನಿರ್ವಾಹಕರನ್ನು ಎಳ್ಳುಕೊಚ್ಚಿಯಲ್ಲಿ ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT