ADVERTISEMENT

ಸುಂಟಿಕೊಪ್ಪ: ಗೌರಿ ಗಣೇಶೋತ್ಸವಕ್ಕೆ 60ರ ಸಂಭ್ರಮ

ಸುನಿಲ್ ಎಂ.ಎಸ್.
Published 6 ಸೆಪ್ಟೆಂಬರ್ 2024, 7:24 IST
Last Updated 6 ಸೆಪ್ಟೆಂಬರ್ 2024, 7:24 IST
<div class="paragraphs"><p>ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ 60ನೇ ವರ್ಷದ ಗೌರಿ ಗಣೇಶ ಉತ್ಸವಕ್ಕೆ ಕಮಾನು ಹಾಕಲಾಗಿದೆ</p></div>

ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ 60ನೇ ವರ್ಷದ ಗೌರಿ ಗಣೇಶ ಉತ್ಸವಕ್ಕೆ ಕಮಾನು ಹಾಕಲಾಗಿದೆ

   

ಸುಂಟಿಕೊಪ್ಪ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ- ಗಣೇಶೋತ್ಸವ ಸಮಿತಿಯಿಂದ 60ನೇ ವರ್ಷದ‌ ಅದ್ಧೂರಿಯ ಗೌರಿ- ಗಣೇಶೋತ್ಸವವವು ಇಂದಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೈದಿಕ ವಿಧಾನ ಗಳೊಂದಿಗೆ 9 ದಿನ ಕಾಲ ನಡೆಯಲಿದೆ.

ಈ ಬಾರಿ 60ನೇ ವರ್ಷದ ಆಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಕೋವಿಡ್ ಸಮಯದಲ್ಲಿ ಮಾತ್ರ ಸರಳ ಆಚರಣೆಗೆ ಒತ್ತು ನೀಡಲಾಗಿತ್ತು.

ADVERTISEMENT

59 ವರ್ಷಗಳ ಹಿಂದೆ ಹಿರಿಯರು ಸಣ್ಣ ಚಪ್ಪರದೊಳಗೆ ಗೌರಿ- ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವಕ್ಕೆ ನಾಂದಿ ಹಾಡಿದ್ದರು‌‌. ಬಳಿಕ ಪಕ್ಕದ ಕೋದಂಡರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಇಲ್ಲಿಯವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನ ಇತಿಹಾಸದಲ್ಲಿಯೇ ಸುಂಟಿಕೊಪ್ಪದ ಗೌರಿ- ಗಣೇಶ ಉತ್ಸವಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ‌. ಕೋದಂಡರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾದಸ್ವರದ ಮೂಲಕ ಪಟ್ಟೆಮನೆ ಅವರ ಕುಟುಂಬಸ್ಥರಿಗೆ ಸೇರಿದ ಗೌರಮ್ಮನ ಬಾವಿಯತ್ತ ಸಾಗಿ ಅಲ್ಲಿ ವಿಶೇಷ ಪೂಜೆಯನ್ನು ನಡೆಸಿ ಗಂಗಾಜಲದೊಂದಿಗೆ, ಮಹಿಳೆಯರು ಕುಂಭಕಳಸ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಗೌರಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ, ದೇವಾಲಯದ ಆವರಣದಲ್ಲಿ ಪ್ರತಿಷ್ಠಾ ಪನೆ ಮಾಡುವುದು ಸಂಪ್ರದಾಯ.

ಸಿದ್ಧತೆ: ಈಗಾಗಲೇ ದೇವಾಲಯದ ಮುಂಭಾಗದಲ್ಲಿ ಚಪ್ಪರವನ್ನು ಹಾಕಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬಾವುಟ, ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಬಾಳೆ ಕಂಬ, ಮಾವಿನ ತೋರಣ ಕಟ್ಟುವ ಕಾಯಕದಲ್ಲಿ ಯುವ ಪಡೆ ಶ್ರಮಿಸುತ್ತಿದೆ.

ಈ ಬಾರಿ 9 ದಿನಗಳವರೆಗೆ ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು ನಡೆಸಲು ಸಕಲ ಸಿದ್ಧತೆ ಮಾಡಲಾಗಿದೆ‌.

ಈ ಬಾರಿ ವಿವಿಧ ಕಲಾ ತಂಡಗಳ ಆಕರ್ಷಣೀಯ ಮೆರವಣಿಗೆ ನಡೆಯಲಿದೆ‌‌. ಆಕರ್ಷಕ ಮಂಟಪದ ವೈಭವತೆ ಈ ಬಾರಿಯ ವಿಸರ್ಜನಾ ಮಹೋತ್ಸವಕ್ಕೆ ಕಳೆ ನೀಡಲಿದೆ ಎಂದು ಸಮಿತಿಯ ಧನು ಕಾವೇರಪ್ಪ, ಸುರೇಶ್ ಗೋಪಿ ತಿಳಿಸಿದ್ದಾರೆ.

ನಾದಸ್ವರ ತಂಡಕ್ಕೂ 60ರ ಸಡಗರ: ಈ ಬಾರಿ ಗೌರಿ ಗಣೇಶೋತ್ಸವ ಆಚರಣೆಗೆ 60 ಸಂಭ್ರಮವಾದರೆ, ಅದೇ ರೀತಿ ಗೌರಮ್ಮ ಪೂಜೆ ಮತ್ತು ಮೆರವಣಿಗೆ ಕೊಪ್ಪದ ಶ್ರೀನಿವಾಸ್ ಅವರ ತಂಡಕ್ಕೂ ಇದು 60 ಸಂಭ್ರಮವಾಗಿದೆ. ಪ್ರತಿಷ್ಠಾಪನೆ ಆರಂಭದಿಂದಲೂ ಶ್ರೀನಿವಾಸ್ ಅವರು ಗೌರಿ ಮೆರವಣಿಗೆ ಮುನ್ನಡೆಸಿಕೊಂಡು ಬಂದಿರುವುದು ವಿಶೇಷ.

ಗೌರಿ- ಗಣೇಶೋತ್ಸವ ಆಚರಣೆಗೆ 60ರ ಸಂಭ್ರಮ. ಆದ್ದರಿಂದ ಯುವ ಪಡೆ ಹೆಚ್ಚಿನ ಆಸಕ್ತಿ ನೀಡಿ ಉತ್ಸವಕ್ಕೆ ಕಳೆ ನೀಡುತ್ತಿದ್ದಾರೆ
ವಿಘ್ನೇಶ್, ಅಧ್ಯಕ್ಷ, ಸುಂಟಿಕೊಪ್ಪ ಗೌರಿ- ಗಣೇಶೋತ್ಸವ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.