ADVERTISEMENT

ಕುಶಾಲನಗರ: ಚಾಮುಂಡೇಶ್ವರಿ, ಗುಳಿಗ ದೇವರ ಪೂಜೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 13:48 IST
Last Updated 13 ಏಪ್ರಿಲ್ 2024, 13:48 IST
ಕುಶಾಲನಗರ ಸಮೀಪದ ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಪೂಜೋತ್ಸವ ನಡೆಯಿತು
ಕುಶಾಲನಗರ ಸಮೀಪದ ಬೊಳ್ಳೂರು ಸುಣ್ಣದಕೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಪೂಜೋತ್ಸವ ನಡೆಯಿತು   

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಸುಣ್ಣದಕೆರೆಯಲ್ಲಿ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ವಾರ್ಷಿಕ ಪೂಜೋತ್ಸವ ಎರಡು ದಿನ ಶ್ರದ್ಧಾಭಕ್ತಿಯಿಂದ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ಅರ್ಚಕ‌ ಬಾಬು ಅವರ ನೇತೃತ್ವದಲ್ಲಿ ನೆರವೇರಿದವು. ಶೀಘ್ರ ಮಳೆಯಾಗಲೆ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಈ ಸಂದರ್ಭ ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.