ಶನಿವಾರಸಂತೆ: ಮಕ್ಕಳೇ ಅತಿಥಿಗಳು, ವಿದ್ಯಾರ್ಥಿಗಳೇ ಅಧ್ಯಕ್ಷರು, ಮಕ್ಕಳಿಂದಲೇ ನಿರೂಪಣೆ, ಪ್ರೇಕ್ಷಕರಾದ ಶಿಕ್ಷಕರು. ಹೀಗೆ ವಿಶಿಷ್ಟವಾದ ಕಾರ್ಯಕ್ರಮವೊಂದು ಸಮೀಪದ ಕೊಡ್ಲಿಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಇಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಶಾಲಾ ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮ ಪ್ರಸ್ತುಪಡಿಸಿದರು. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದ.
ಶಾಲಾ ವಿದ್ಯಾರ್ಥಿ ಕಿರಣ್‍ಕುಮಾರ್ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದು, ವಿಭಿನ್ನವಾಗಿ ನಿರೂಪಣೆ ಮಾಡಿ ಗಮನ ಸೆಳೆದ. ಶಾಲಾ ವಿದ್ಯಾರ್ಥಿಗಳಿಂದ ನಾಟಕ, ನೃತ್ಯ, ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳೇ ಬಹುಮಾನ ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಆಶಾ, ಸಹ ಶಿಕ್ಷಕರಾದ ಸ್ನೇಹಾ ಬಸಮ್ಮ, ರೀನಾ, ಉಷಾದೇವಿ, ಕವಿತಾ, ಚಿತ್ರಕಲಾ, ಗೌರಮ್ಮ, ಮಂಜುಳ, ನಂದಿನಿ ಶಾಲೆಯ ಇಂಗ್ಲಿಷ್ ಮಾಧ್ಯಮ ವಿಭಾಗದ ಶಿಕ್ಷಕರು ಮತ್ತು ಶಾಲೆ ವಿದ್ಯಾರ್ಥಿ ಮಂಡಲದ ನಾಯಕರಾದ ಸೂರಜ್, ಚರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.